23 ಕಾಂಗ್ರೆಸಿಗರ ರಾಜೀನಾಮೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೊಸ ಬಾಂಬ್

By Web DeskFirst Published Nov 2, 2019, 12:30 PM IST
Highlights

 23 ಕಾಂಗ್ರೆಸಿಗರು ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಬೆಳಗಾವಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಬೆಳಗಾವಿ [ನ.02]: ಗೋಕಾಕ್ ತಾಲೂಕು ಪಂಚಾಯಿತಿಯ 23 ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿದ್ದು, ಇದರಲ್ಲಿ ಯಾವುದೇ ರೀತಿಯ ಅಚ್ಚರಿ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿ ಸತೋಶ್ ಜಾರಕಿಹೊಳಿ, ಗೋಕಾಕ್ ತಾಲೂಕು ಪಂಚಾಯತ್ ನ 23 ಜನ ಕಾಂಗ್ರೆಸ್ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕಾರಣದಿಂದ ಅವರಿಗೆ ಒಂದು ವಾರದ ಹಿಂದೆ  ನೋಟಿಸ್ ನೀಡಿದ್ದೆವು ಎಂದಿದ್ದಾರೆ. 

ಇನ್ನು ಇವರೆಲ್ಲಾ ರಾಜೀನಾಮೆಯನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ನೀಡಬೇಕು. ಆದರೆ ಅಧಿಕಾರಿಗಳ ಬಳಿ ರಾಜೀನಾಮೆ ನೀಡಿದ್ದು, ಪಕ್ಷದ ವ್ಯವಹಾರ ಪಕ್ಷದಲ್ಲಿಯೇ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇನ್ನು ಗೋಕಾಕ್ ನಲ್ಲಿ ಕಾಂಗ್ರೆಸ್ ಖಾಲಿ ಮಾಡಿಸುವ ಪ್ರಶ್ನೆಯೇ ಇಲ್ಲ.  ಇವರ ರಾಜೀನಾಮೆಯಿಂದ ಕಾಂಗ್ರೆಸ್ ಖಾಲಿ ಮಾಡಲು ಸಾಧ್ಯವಾಗುವುದಿಲ್ಲ.  ಈಗ ರಾಜೀನಾಮೆ ನೀಡಿದ ಸದಸ್ಯರು ರಮೇಶ್ ಹಿಡಿತದಲ್ಲಿದ್ದಾರೆ‌. ಅವರ ಬಗ್ಗೆ ತಲೆಕೆಡಸಿಕೊಳ್ಳುವುದಿಲ್ಲ ಎಂದರು. 

ನಿನ್ನೆ ಸಿದ್ದು-ಸುಮಲತಾ, ಇಂದು ಲಕ್ಷ್ಮಿ-ಜಾರಕಿಹೊಳಿ ಎದುರುಬದುರಾದಾಗ...?...

ಇನ್ನು ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾಯ ಪಾಟೀಲ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತೇವೆ. ಜನ ಯಾವ ರೀತಿ ಆಶೀರ್ವಾದ ಮಾಡುತ್ತಾರೆ‌ ಕಾದು ನೋಡಬೇಕಿದೆ ಎಂದರು. 

ಅಲ್ಲದೇ ರಮೇಶ್ ಕಳೆದುಕೊಂಡ ವಸ್ತು ಇನ್ನೂ ಸಿಕ್ಕಿಲ್ಲ. ಸಿಕ್ಕಾಗ ಬಹಿರಂಗ ಮಾಡುತ್ತೇವೆ. ಗೋಕಾಕ್ ಭ್ರಷ್ಟಾಚಾರದ ಕುರಿತು ಇನ್ನೊಂದು ವಿಡಿಯೋ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಸಾಲ ತೀರಿಸೋಕೆ ರಮೇಶ ಬಿಜೆಪಿಗೆ: ಸತೀಶ್‌ ಆರೋಪ...

ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅನರ್ಹತೆಯಿಂದ ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 5ಕ್ಕೆ ಡೇಟ್ ಫಿಕ್ಸ್ ಆಗಿದೆ. ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಅಂತಿಮವಾಗಿದ್ದು, ಪಕ್ಷಗಳಲ್ಲಿ ಚುನಾವಣಾ ತಯಾರಿ ಜೋರಾಗಿದೆ. 

click me!