Union Bank Recruitment 2022: ಸ್ನಾತಕೋತ್ತರ ಪದವೀಧರರಿಗೆ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ

By Suvarna News  |  First Published Dec 20, 2021, 7:01 PM IST
  • ಖಾಲಿ ಇರುವ 25 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯೂನಿಯನ್ ಬ್ಯಾಂಕ್
  • ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 7 ಕೊನೆ ದಿನ
  • ಬಿಇ, ಬಿ.ಟೆಕ್, ಬಿಎಸ್ಸಿ, ಎಂಎಸ್ಸಿ, ಎಂಬಿಎ, ಎಂಎ, ಎಂ.ಟೆಕ್​, ಎಂಸಿಎ ಪೂರ್ಣಗೊಳಿಸಿದವರಿಗೆ ಸುವರ್ಣವಕಾಶ

ಬೆಂಗಳೂರು(ಡಿ.20): ಯೂನಿಯನ್ ಬ್ಯಾಂಕ್​ ಆಫ್​ ಇಂಡಿಯಾ (Union Bank of India)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು  ಜನವರಿ 7, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ಅನಾಲಿಸ್ಟ್​ ಟೀಂ, ಎಕನಾಮಿಸ್ಟ್​ ಟೀಂ, ಡಿಜಿಟಲ್​ ಟೀಂ, ರಿಸರ್ಚ್​ ಟೀಂ, API ಮ್ಯಾನೇಜ್ಮೆಂಟ್​​ ಟೀಮ್ ಹೀಗೆ ಒಟ್ಟು  25 ​ ಹುದ್ದೆಗಳು ಖಾಲಿ ಇದೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ bankifsccode.com ಗೆ ಭೇಟಿ ನೀಡಿ ಮಾಡಹಿತಿ ಪಡೆದುಕೊಳ್ಳಬಹುದು.

ಯೂನಿಯನ್ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ 25 ​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಬಿಇ, ಬಿ.ಟೆಕ್, ಬಿಎಸ್ಸಿ, ಎಂಎಸ್ಸಿ, ಎಂಬಿಎ, ಎಂಎ, ಎಂ.ಟೆಕ್​, ಎಂಸಿಎ ಪೂರ್ಣಗೊಳಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

Tap to resize

Latest Videos

undefined

ಯೂನಿಯನ್ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ  ಹುದ್ದೆಗಳ ವಿವರ ಇಂತಿದೆ:
ಡಿಜಿಟಲ್ ಟೀಂ-2
ಅನಾಲಿಸ್ಟ್​ ಟೀಂ-7
ಎಕನಾಮಿಸ್ಟ್​ ಟೀಂ-4
ರಿಸರ್ಚ್​ ಟೀಂ-4
API ಮ್ಯಾನೇಜ್ಮೆಂಟ್ ಟೀಂ-4
ಡಿಜಿಟಲ್​ ಲೆಂಡಿಂಗ್​ & ಫಿನ್​​ ಟೆಕ್​ ಟೀಂ-4

BCP RECRUITMENT 2022: ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ

ಆಯಾಯ ಹುದ್ದೆಗಳಿಗೆ ಸಂಬಂಧಿಸಿ ವಯೋಮಿತಿ ವಿವರಗಳು ಇಂತಿದೆ
ಡಿಜಿಟಲ್ ಟೀಂ-35ರಿಂದ 40 ವರ್ಷ
ಅನಾಲಿಸ್ಟ್​ ಟೀಂ- 25ರಿಂದ 35 ವರ್ಷ
ಎಕನಾಮಿಸ್ಟ್​ ಟೀಂ- 35 ರಿಂದ 40 ವರ್ಷ
ರಿಸರ್ಚ್​ ಟೀಂ- 35ರಿಂದ 40 ವರ್ಷ
API ಮ್ಯಾನೇಜ್ಮೆಂಟ್ ಟೀಂ- 35ರಿಂದ 40 ವರ್ಷ
ಡಿಜಿಟಲ್​ ಲೆಂಡಿಂಗ್​ & ಫಿನ್​​ ಟೆಕ್​ ಟೀಂ- 35ರಿಂದ 40 ವರ್ಷ

EPFO Recruitment 2022: ಇಪಿಎಫ್ಓ ನಲ್ಲಿ ಖಾಲಿ ಇರುವ 98 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು-800 ರೂ.  ಮತ್ತು SC/ST/PWD ಅಭ್ಯರ್ಥಿಗಳು-150 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗಿದೆ.

ವೇತನ ಮತ್ತು ಆಯ್ಕೆ ಪ್ರಕ್ರಿಯೆ: ಶಾರ್ಟ್​​ಲಿಸ್ಟಿಂಗ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ ನೀಡಲಾಗುತ್ತದೆ. ಮಾತ್ರವಲ್ಲ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮುಂಬೈನಲ್ಲಿ ಉದ್ಯೋಗ ಮಾಡಬೇಕಾಗುತ್ತದೆ. 

CA, MBA, PGDBM ಆದವರಿಗೆ ಅಭ್ಯುದಯ ಬ್ಯಾಂಕ್ ನಲ್ಲಿ  ಉದ್ಯೋಗ: ಅಭ್ಯುದಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್(Abhyudaya Co-Operative Bank Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 15 ಮ್ಯಾನೇಜ್​​ಮೆಂಟ್​ ಟ್ರೇನಿ (Management Trainee) ಹುದ್ದೆಗಳು ಖಾಲಿ ಇದೆ. ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು  ಆನ್​ಲೈನ್​(Online)ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 3, 2022 ಆಗಿದೆ. ಅಭ್ಯರ್ಥಿಗಳು ಅಭ್ಯುದಯ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ ​abhyudayabank.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಮತ್ತು ವಿದ್ಯಾರ್ಹತೆ: ಮ್ಯಾನೇಜ್​​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರಬೇಕು.

click me!