Abhyudaya Bank Recruitment 2022: CA, MBA, PGDBM ಆದವರಿಗೆ ಅಭ್ಯುದಯ ಬ್ಯಾಂಕ್ ನಲ್ಲಿ ಕೆಲಸ ಇದೆ

By Suvarna News  |  First Published Dec 20, 2021, 4:31 PM IST
  • 15 ಮ್ಯಾನೇಜ್​​ಮೆಂಟ್​ ಟ್ರೇನಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಅಭ್ಯುದಯ ಬ್ಯಾಂಕ್ 
  • ಸಿಎ, ಎಂಬಿಎ, ಪಿಜಿಡಿಬಿಎಂ ಆದವರಿಗೆ ಅವಕಾಶ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 3

ಬೆಂಗಳೂರು(ಡಿ.20): ಅಭ್ಯುದಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್(Abhyudaya Co-Operative Bank Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 15 ಮ್ಯಾನೇಜ್​​ಮೆಂಟ್​ ಟ್ರೇನಿ (Management Trainee) ಹುದ್ದೆಗಳು ಖಾಲಿ ಇದೆ. ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು  ಆನ್​ಲೈನ್​(Online)ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 3, 2022 ಆಗಿದೆ. ಅಭ್ಯರ್ಥಿಗಳು ಅಭ್ಯುದಯ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ ​abhyudayabank.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಮತ್ತು ವಿದ್ಯಾರ್ಹತೆ: ಮ್ಯಾನೇಜ್​​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರಬೇಕು.

Tap to resize

Latest Videos

undefined

ಆಯ್ಕೆಪ್ರಕ್ರಿಯೆ & ವಯೋಮಿತಿ: ಮ್ಯಾನೇಜ್​​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30-35 ವರ್ಷದೊಳಗಿರಬೇಕು. ಆನ್​ಲೈನ್​ ಟೆಸ್ಟ್​ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು, ಗಾಂಧಿನಗರ, ಮುಂಬೈ ನಲ್ಲಿ ಕೆಲಸ ಇದೆ. ಮತ್ತು ಹುದ್ದೆಗೆ  ಮಾಸಿಕ  35,000 ರೂ ನಿಂದ 40,000 ರೂ ವರೆಗೆ ವೇತನ ನಿಗದಿಪಡಿಸಲಾಗಿದೆ.

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ BSNL:
ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharath Sanchar Nigam Limited-BSNL), ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಯ ಪೋಸ್ಟ್‌ಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಅಪ್ರೆಂಟಿಸ್ ಹುದ್ದೆಗಳಿಗೆ ಡಿಸೆಂಬರ್ 29ರವರೆಗೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಬಿಎಸ್‌ಎನ್‌ಎಲ್ ಒಟ್ಟು 55 ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಅರ್ಹರು ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್‌ಎನ್‌ಎಲ್, ಮಹಾರಾಷ್ಟ್ರದ ನೇಮಕಾತಿಗೆ ಈ ಬಾರಿ ಅರ್ಜಿಗಳನ್ನು ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಮಹಾರಾಷ್ಟ್ರದ ಅಧಿಕೃತ ಪೋರ್ಟಲ್ www.mhrdnats.gov.in ಮೂಲಕ ಅರ್ಜಿ ಸಲ್ಲಿಸಬೇಕು. 

EPFO RECRUITMENT 2022: ಇಪಿಎಫ್ಓ ನಲ್ಲಿ ಖಾಲಿ ಇರುವ 98 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಮಹಾರಾಷ್ಟ್ರ (MH) ಟೆಲಿಕಾಂ ಸರ್ಕಲ್, ಇಂಜಿನಿಯರಿಂಗ್/ ಟೆಕ್ನಾಲಜಿ ಕ್ಷೇತ್ರದಲ್ಲಿ (ಎಲೆಕ್ಟ್ರಾನಿಕ್ಸ್/ ಇ& ಟಿಸಿ/ ಕಂಪ್ಯೂಟರ್/ ಐಟಿ) ಡಿಪ್ಲೋಮಾ ಹೊಂದಿರುವವರನ್ನು ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ನೇಮಕ ಮಾಡಿಕೊಳ್ಳಲಿದೆ. ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು ಒಂದು ವರ್ಷವಿರುತ್ತದೆ. 

KMF Recruitment 2022: ವಿಜಯಪುರ & ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕೆಲಸ

ಈಗಾಗಲೇ ಡಿಸೆಂಬರ್ 14ರಿಂದ ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತ್ ಸಂಚಾರ್ ನಿಗಮ್ ಎಂಎಚ್ ಸರ್ಕಲ್‌ ನೇಮಕಾತಿಗೆ ಡಿಸೆಂಬರ್ 29 ರೊಳಗೆ ಅರ್ಜಿ ಸಲ್ಲಿಸಬೇಕು.  ಮಹಾರಾಷ್ಟ್ರದ (Maharastra) ಬಿಎಸ್ಎನ್ಎಲ್ ಅಧಿಕೃತ ವೆಬ್‌ಸೈಟ್ mhrdnats.gov.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಮಾಣಪತ್ರ ಮತ್ತು ದಾಖಲೆ ಪರಿಶೀಲನೆಯು ಜನವರಿ 3, 2022 ರಂದು ನಡೆಯಲಿದೆ. ಆಯ್ಕೆ ಪಟ್ಟಿಯನ್ನು ಜನವರಿ 5, 2022 ರಂದು ಘೋಷಿಸಲಾಗುತ್ತದೆ. 

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು ಡಿಸೆಂಬರ್ 29, 2021 ರಂತೆ 25 ವರ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಗ್ಯೂ, ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. 

click me!