SBIನಲ್ಲಿ ಅಗ್ನಿಶಾಮಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

By Suvarna NewsFirst Published Jun 16, 2021, 7:18 PM IST
Highlights

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (SBI) ಖಾಲಿ ಇರುವ ಅಗ್ನಿಶಾಮಕ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 15ರಿಂದ ಶುರವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಗ್ನಿಶಾಮಕ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಅರ್ಜಿ ಪ್ರಕ್ರಿಯೆಯನ್ನ ಮತ್ತೆ ಆರಂಭಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 15 ರಿಂದ ಶುರುವಾಗಿದ್ದು, ಜೂನ್ 28 ಕೊನೆಯ ದಿನಾಂಕವಾಗಿದೆ.  ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ sbi.co.inಗೆ ಭೇಟಿ ನೀಡಬಹುದು. 

ಬಿಐಎಸ್‌ನಲ್ಲಿ 28 ಹುದ್ದೆಗಳಿಗೆ ನೇಮಕಾತಿ, ತಿಂಗಳಿಗೆ 87 ಸಾವಿರ ರೂ. ಸಂಬಳ!

ಅಭ್ಯರ್ಥಿಗಳು recruitment.bank.sbi.ನಲ್ಲಿ ಅಗ್ನಿಶಾಮಕ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದ್ರೆ ಈಗಾಗಲೇ 2020ರ ಡಿಸೆಂಬರ್ 22 ರಿಂದ 27 ರವರೆಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಅವರ ಉಮೇದುವಾರಿಕೆಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಎಸ್‌ಬಿಐ ಎಸ್‌ಒ ನೇಮಕಾತಿ-2021 ಡ್ರೈವ್, ಅಗ್ನಿಶಾಮಕ ಅಧಿಕಾರಿಗಳ 16 ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುತ್ತಿದೆ. ನೇಮಕಾತಿ ಪ್ರಾಧಿಕಾರವು ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಿದೆ. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅರ್ಹತಾ ಮಾನದಂಡಗಳನ್ನ ಗಮನಿಸಬೇಕು. ಯಾಕಂದ್ರೆ ಕಳೆದ ಬಾರಿಗಿಂತ ಈ ಸಲ ಶೈಕ್ಷಣಿಕ ಅರ್ಹತೆಯಲ್ಲಿ ಕೆಲ ಮಾರ್ಪಾಡುಗಳನ್ನ ಮಾಡಲಾಗಿದೆ. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಿಂದ (ಎನ್‌ಎಫ್‌ಎಸ್‌ಸಿ) ಬಿ.ಇ. (ಫೈರ್) ಅಥವಾ ಬಿ.ಟೆಕ್ / ಬಿ.ಇ. (ಸುರಕ್ಷತೆ ಮತ್ತು ಅಗ್ನಿಶಾಮಕ ಎಂಜಿನಿಯರಿಂಗ್) ಅಥವಾ ಬಿ.ಟೆಕ್ / ಬಿ.ಇ. (ಅಗ್ನಿಶಾಮಕ ತಂತ್ರಜ್ಞಾನ ಮತ್ತು ಸುರಕ್ಷತಾ ಎಂಜಿನಿಯರಿಂಗ್) ಪದವಿ ಪೂರೈಸಿರಬೇಕು. ಅಥವಾ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಸಿ. (ಫೈರ್)/ ಎಐಸಿಟಿಇ ಅನುಮೋದಿತ ಸಂಸ್ಥೆ ಅಥವಾ ಅಗ್ನಿ ಸುರಕ್ಷತೆಯಲ್ಲಿ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು. ಅಥವಾ ಇನ್ಸ್ಟಿಟ್ಯೂಟ್ ಆಫ್ ಫೈರ್ ಇಂಜಿನಿಯರ್ಸ್ (ಭಾರತ / ಯು.ಕೆ.) ಯಿಂದ ಪದವಿ ಪಡೆದವರು ಅಥವಾ ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಿಂದ (ಎನ್ಎಫ್ಎಸ್ಸಿ) ವಿಭಾಗೀಯ ಅಧಿಕಾರಿಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.

ಗ್ರಾಮೀಣ ಬ್ಯಾಂಕುಗಳಲ್ಲಿ 10,447 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಗುಜರಾಯಿಸಿ

ಇನ್ನು ಅಗ್ನಿಶಾಮಕ ದಳ / ರಾಜ್ಯ ಅಗ್ನಿಶಾಮಕ ಸೇವೆ / ಕಾರ್ಪೊರೇಟ್ / ದೊಡ್ಡ ಕೈಗಾರಿಕಾ ಸಂಕೀರ್ಣದಲ್ಲಿ ಉಸ್ತುವಾರಿ ಅಗ್ನಿಶಾಮಕ ಅಧಿಕಾರಿ ಅಥವಾ ರಾಜ್ಯ / ಕೇಂದ್ರ ಸರ್ಕಾರ / ಪಿಎಸ್ಯುಗಳಲ್ಲಿ ಅಗ್ನಿಶಾಮಕ ಅಧಿಕಾರಿಯಾಗಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವವರು ಎಸ್‌ಬಿಐ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರು.

ಎಸ್‌ಬಿಐ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಗ್ನಿ ಸುರಕ್ಷತಾ ಮಾನದಂಡಗಳು ಹಾಗೂ ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ / ಕೇಂದ್ರ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಚೆನ್ನಾಗಿ ತಿಳಿದಿರಬೇಕು. ಅಭ್ಯರ್ಥಿಯು ಹೈಡ್ರಾಂಟ್ ಸಿಸ್ಟಮ್, ಫೈರ್ ಡಿಟೆಕ್ಷನ್ ಸಿಸ್ಟಮ್, ಸ್ಪ್ರಿಂಕ್ಲರ್ ಸಿಸ್ಟಮ್ ಮುಂತಾದ ಅಗ್ನಿ ತಡೆಗಟ್ಟುವಿಕೆ ಮತ್ತು ಸಂರಕ್ಷಣಾ ವ್ಯವಸ್ಥೆಯ ಬಗ್ಗೆ ನಿಕಟ ಜ್ಞಾನವನ್ನು ಹೊಂದಿರಬೇಕು. ಅಗ್ನಿ ಅವಘಡದಲ್ಲಿ ಸಿಲುಕಿದವರನ್ನು ಕೂಡಲೇ ಸ್ಥಳಾಂತರಿಸುವ ಸಮಸ್ಯೆ ಮತ್ತು ಫೈರ್ ಆಡಿಟ್ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕು "ಎಂದು ಎಸ್‌ಬಿಐ ನೋಟಿಫಿಕೇಷನ್‌ನಲ್ಲಿ ತಿಳಿಸಿದೆ. 

ಜನರಲ್, ಇಡಬ್ಲ್ಯೂಎಸ್, ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 750. ಆಗಿದೆ. ಇನ್ನು ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಎಸ್‌ಬಿಐ ಅಗ್ನಿಶಾಮಕ ಅಧಿಕಾರಿ ಹುದ್ದೆಗಳ ನೇಮಕಾತಿ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 

ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಜೆಐ!

click me!