* ದೇಶದ ನಾನಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಲ್ಲಿ ಖಾಲಿ ಇರುವ 10,447 ಹುದ್ದೆಗಳಿಗೆ ಐಬಿಎಸ್ ನೇಮಕಾತಿ ಪ್ರಕ್ರಿಯೆ ಆರಂಭ
* ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
* ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 28 ಕೊನೆಯ ದಿನ.
ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಬಂಪರ್ ಆಫರ್‌ವೊಂದು ಸಿಕ್ಕಿದೆ. ಹೌದು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ದೇಶಾದ್ಯಂತ ಕನ್ನಡ ಸೇರಿ ಸುಮಾರು 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿಯಿರುವ ಆಫೀಸರ್ ಮತ್ತು ಆಫೀಸರ್ ಅಸಿಸ್ಟೆಂಟ್ ವಿಭಾಗದಲ್ಲಿ ಬರೋಬ್ಬರೀ 10,447 ವಿವಿಧ ಹುದ್ದೆಗಳನ್ನ ಭರ್ತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಜೂನ್ 8 ರಿಂದ ಶುರುವಾಗಿದ್ದು, ಜೂನ್ 28 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕೂಡಲೇ ಅರ್ಜಿ ಸಲ್ಲಿಸಬಹುದು.
undefined
ಈ 10,676 ಹುದ್ದೆಗಳ ಪೈಕಿ 5,076 ಹುದ್ದೆಗಳು ಕಚೇರಿ ಸಹಾಯಕರು, 4,206 ಆಫೀಸರ್ ಸ್ಕೇಲ್ -1 (ಸಹಾಯಕ ಮ್ಯಾನೇಜರ್) ಹುದ್ದೆಗಳು, ಆಫೀಸರ್ ಸ್ಕೇಲ್ 2ಗೆ 1,060 ಹುದ್ದೆ ಮತ್ತು ಆಫೀಸರ್ ಸ್ಕೇಲ್-೩ನಲ್ಲಿ 156 ಹುದ್ದೆಗಳು ಸೇರಿವೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಪದವೀಧರರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಪದವಿ, ಎಂಬಿಎ, ಸಿಎ, ಸ್ನಾತಕೋತ್ತರ ಪದವಿ ಪಡೆದಿರಬೇಕು.
ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ
ಸಾಮಾನ್ಯ ನೇಮಕಾತಿ ಮೂಲಕ ಐಬಿಪಿಎಸ್ ಕ್ಲರ್ಕ್/ ಪಿಒ ನೇಮಕಾತಿಯು ನಡೆಯಲಿದೆ. ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ ಇಂತಹ 43 ಪ್ರಾದೇಶಿಕ ಬ್ಯಾಂಕ್ ಕ್ಗಳಲ್ಲಿ ಖಾಲಿಯಿರೋ ೧೦ ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಗಳಲ್ಲಿ ಆನ್‌ಲೈನ್ ಮೂಲಕ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆ- ಎರಡಕ್ಕೂ ಒಂದೇ ರಿಜಿಸ್ಟ್ರೇಷನ್ ಬಳಕೆಯಾಗಲಿದೆ. PO ಮತ್ತು ಗುಮಾಸ್ತ ಹುದ್ದೆಗಳಿಗೆ ಆಗಸ್ಟ್ 1, ಆಗಸ್ಟ್ 7, ಆಗಸ್ಟ್ 8, ಆಗಸ್ಟ್ 14, ಆಗಸ್ಟ್ 21ನೇ ದಿನಾಂಕದಲ್ಲಿ ಪ್ರಿಲಿಮಿನರಿ ಪರೀಕ್ಷೆ ನಡೆಯೋ ಸಾಧ್ಯತೆಯಿದೆ.
ಪ್ರಿಲಿಮ್ಸ್ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯಪರೀಕ್ಷೆಗೆ ಕರೆಯಲಾಗುತ್ತದೆ. ಪಿಒ ಹುದ್ದೆಗೆ ಮೈನ್ಸ್ ಪರೀಕ್ಷೆಯು ಸಪ್ಟೆಂಬರ್ 25ರಂದು ಮತ್ತು ಕ್ಲರ್ಕ್ ಹುದ್ದೆಗೆ ಮೈನ್ಸ್ ಪರೀಕ್ಷೆಯು ಅಕ್ಟೋಬರ್ 3ರಂದು ನಡೆಯಲಿದೆ. ದರ್ಜೆ 2 ಮತ್ತು 3 ಅಧಿಕಾರಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯು ಒಂದೇ ಪರೀಕ್ಷೆ ಮೂಲಕ ಸೆಪ್ಟೆಂಬರ್ 25ರಂದು ನಡೆಯಲಿದೆ.
3322 ಅಪ್ರೆಂಟಿಸ್ ಹುದ್ದೆಗಳಿಗೆ ದಕ್ಷಿಣ ಮಧ್ಯೆ ರೈಲ್ವೆ ಅರ್ಜಿ ಆಹ್ವಾನ
ದರ್ಜೆ 1, 2 ಮತ್ತು 3ರ ಗ್ರೂಪ್ ಎ ಅಧಿಕಾರಿ ಹುದ್ದೆಗೆ ಸಂದರ್ಶನ ಪ್ರಕ್ರಿಯೆಯು ಸ್ಥಳೀಯ ಗ್ರಾಮೀಣ ಬ್ಯಾಂಕ್ಗಳಲ್ಲಿ ನಿಗದಿತ ಅಧಿಕಾರಿಗಳ ಸೂಚನೆಯಂತೆ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಮಲ್ಟಿಪರ್ಪಸ್ ಹಾಗೂ ಐಟಿ, ಕೃಷಿ, ಕಾನೂನು, ಎಚ್ಆರ್, ಮಾರ್ಕೇಟಿಂಗ್ ಹಾಗೂ ರಾಜಭಾಷೆ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್https://www.ibps.in/ ಗೆ ಭೇಟಿ ಕೊಡಬಹುದು.
ಪೂರ್ವಭಾವಿ ಪರೀಕ್ಷೆಯು ಆಗಸ್ಟ್ 2021ಕ್ಕೆ ನಡೆಯಲಿದೆ. ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021 ರಲ್ಲಿ ನಡೆಯಲಿದೆ. ಇನ್ನು ಅಭ್ಯರ್ಥಿಗಳ ವಯೋಮಿತಿ ಜೂನ್ 2021ಕ್ಕೆ ಅನ್ವಯವಾಗುವಂತೆ 20ರಿಂದ 30 ವರ್ಷದೊಳಗಿರಬೇಕು. ಮೀಸಲಾತಿ ನಿಯಮಗಳು ಅನ್ವಯಿಸಲಿದ್ದು, ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 850 ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175 ರೂಪಾಯಿ ಶುಲ್ಕವಿದೆ. ಲಿಖಿತ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು 28-06-2021 ಕೊನೆಯ ದಿನಾಂಕವಾಗಿದೆ.