SBIನಲ್ಲಿ 6100 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Jul 9, 2021, 10:51 AM IST
Highlights

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಎಸ್‌ಬಿಐ 2021ನೇ ಸಾಲಿಗೆ 6100 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಜುಲೈ 26 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಲ ಬರೋಬ್ಬರೀ 6100 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಸಲ್ಲಿಸಬಹುದಾಗಿದ್ದು, ಜುಲೈ 26ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಸ್ಪೋರ್ಟ್ಸ್ ಕೋಟಾದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಆಗಿ
 
ಸಾಮಾನ್ಯ / ಆರ್ಥಿಕ ಜಾಗೃತಿ, ಸಾಮಾನ್ಯ ಇಂಗ್ಲಿಷ್, ಆಪ್ಟಿಟ್ಯೂಡ್ ಮತ್ತು ತಾರ್ಕಿಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್.- ಹೀಗೆ 4 ವಿಷಯಗಳಿಗೆ ಸಂಬಂಧಿಸಿದಂತೆ ಆನ್ಲೈನ್ಲಿಖಿತ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ವಿಭಾಗವು 25 ಪ್ರಶ್ನೆಗಳನ್ನು ಹೊಂದಿರುತ್ತದೆ. ಹಿಂದಿ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲೂ ಪ್ರಶ್ನೆಪ್ರತ್ರಿಕೆ ಇರಲಿದ್ದು, ಆಬ್ಜೆಕ್ಟಿವ್ ಮಾದರಿಯಲ್ಲಿ ತಪ್ಪು ಉತ್ತರಗಳಿಗೆ ಮಾರ್ಕ್ಸ್ ಕಡಿತ ಮಾಡಲಾಗುತ್ತದೆ.  

ಆಗಸ್ಟ್‌ ತಿಂಗಳಿನಲ್ಲಿ ಲಿಖಿತ ಪರೀಕ್ಷೆ ನಡೆಯೋ ನೀರಿಕ್ಷೆಯಿದೆ. ಆದ್ರೆ ಪರೀಕ್ಷೆಗೆ ಇನ್ನು ಯಾವುದೇ ದಿನಾಂಕ ಫೈನಲ್ ಆಗಿಲ್ಲ. ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು, ಬಳಿಕ ತಮ್ಮ ಪ್ರಾದೇಶಿಕ ಭಾಷೆಯ ಟೆಸ್ಟ್ ಅನ್ನು ಎದುರಿಸಬೇಕಾಗುತ್ತದೆ. ಅವರು ಅರ್ಜಿ ಸಲ್ಲಿಸಿರುವ ರಾಜ್ಯದ ಭಾಷೆಗನುಗುಣವಾಗಿ ಪರೀಕ್ಷೆ ಬರೆಯಬೇಕು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಯಲಿದೆ. 

ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು 3 ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ವರ್ಷದ ಅವಧಿಯಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಆಂಡ್ ಫೈನಾನ್ಸ್ (ಐಐಬಿಎಫ್) ಪರೀಕ್ಷೆ ಎದುರಿಸಲು ಅಪ್ರೆಂಟಿಸ್‌ಗಳು ಅರ್ಹರಾಗಿರುತ್ತಾರೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಕಾಲ ತರಬೇತಿ ನೀಡಲಾಗುತ್ತದೆ.

ಆರ್ಥಿಕ ಹಿಂಜರಿತ ಉಂಟಾದ್ರೆ, ಯಾವೆಲ್ಲ ಉದ್ಯೋಗಳು ಉಳಿಯಲಿವೆ?

ಎಲ್ಲಾ ಅಭ್ಯರ್ಥಿಗಳು (ಪರ್ಯಾಯ ಐಡಿ ಹೊಂದಿರುವ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮುನ್ನ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸ್ಬಿಐ ಬ್ಯಾಂಕ್ನ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದವಗೆ ತಿಂಗಳಿಗೆ 15 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತದೆ. ಆದ್ರೆ ಅವರು ಬೇರೆ ಯಾವುದೇ ಅಲೊಯೆನ್ಸ್/ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ. 

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಎಸ್‌ಬಿಐ ಬ್ಯಾಂಕ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ 20 ವರ್ಷ ತುಂಬಿರಬೇಕು. ಹಾಗೇ ಗರಿಷ್ಟ ವಯೋಮಿತಿ 28 ವರ್ಷವಾಗಿರುತ್ತದೆ. 2020ರ ಅಕ್ಟೋಬರ್ 31ಕ್ಕೆ ಅನ್ವಯವಾಗುವಂತೆ ವಯೋಮಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

ಸರ್ಕಾರದ ನಿಯಮದಂತೆ ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳು 300 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಆದ್ರೆ ಎಸ್‌ಸಿ, ಎಸ್‌ಟಿ, ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಶುಲ್ಕದ ಮೊತ್ತ ಪಾವತಿಸಿದಾಗ ಮಾತ್ರ ನಿಮ್ಮ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. 

PU ಪಾಸಾದವರಿಗೆ ಆಯಿಲ್ ಇಂಡಿಯಾ ಕಂಪನಿಯಲ್ಲಿ ಕೆಲಸ, ಅಪ್ಲೈ ಮಾಡಿ

ಅಭ್ಯರ್ಥಿಗಳು ಜುಲೈ ೨೬ರೊಳಗೆ sbi.co.in ಮೂಲಕ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 6100 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 2577 ಹುದ್ದೆಗಳು, ಒಬಿಸಿಗೆ 1375 ಹುದ್ದೆಗಳು, ಎಸ್‌ಸಿ 977, ಇಡಬ್ಲ್ಯೂಎಸ್ 604 ಹಾಗೂ ಎಸ್‌ಟಿ 567 ಹುದ್ದೆಗಳು ಸೇರಿ ಒಟ್ಟು 6100 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ. 

click me!