SBI ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ರದ್ದು: ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು

By Suvarna News  |  First Published Jul 12, 2021, 5:18 PM IST

* ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಬಿಗ್​ ಶಾಕ್​ 
* 8500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕರೆದಿದ್ದ ಅರ್ಜಿ ರದ್ದು
* ಲಕ್ಷಾಂತರ ಅಭ್ಯರ್ಥಿಗಳ ಕನಸು ನುಚ್ಚುನೂರು


ನವದೆಹಲಿ, (ಜು.12):  ಕಳೆದ ನವೆಂಬರ್ 20ರಂದು 8500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕರೆದಿದ್ದ ಅರ್ಜಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರದ್ದುಗೊಳಿಸಿದೆ. 

ಈ ಮೂಲಕ ಅಪ್ರೆಂಟಿಸ್​ ಆಗಿ ಸೇವೆ ಸಲ್ಲಿಸಲು ಬಯಸಿ ಅರ್ಜಿ ಸಲ್ಲಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಬಿಗ್​ ಶಾಕ್​ ನೀಡಿದೆ.

Tap to resize

Latest Videos

undefined

8400 ಹುದ್ದೆಗಳಿಗೆ IBPS ಅರ್ಜಿ ಆಹ್ವಾನ: ಅರ್ಜಿ ಹಾಕಿ

ಅನಿವಾರ್ಯ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದ್ದು, ಅಭ್ಯರ್ಥಿಗಳು ಸಂದಾಯ ಮಾಡಿರುವ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ ಎಂದು ಎಸ್​ಬಿಐ ಹೇಳಿದೆ. ಆದರೆ ಈ ಶುಲ್ಕ ವಾಪಸ್​ ಹೇಗೆ ನೀಡುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಬ್ಯಾಂಕ್ ಹಣವನ್ನು ಅಭ್ಯರ್ಥಿಗಳ ಖಾತೆಗೆ ಜಮಾ ಆಗಬಹುದು ಇಲ್ಲವೇ ನಿಗದಿತ ನಮೂನೆ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಬೇಕಾಗಬಹುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಬ್ಯಾಂಕ್​ ತಿಳಿಸಲಿದೆ.

click me!