4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

Suvarna News   | Asianet News
Published : Oct 22, 2021, 04:45 PM ISTUpdated : Oct 22, 2021, 04:47 PM IST
4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

ಸಾರಾಂಶ

ಐಬಿಪಿಎಸ್ (IBPS) ಪ್ರೊಬೇಷರಿ ಅಧಿಕಾರಿಗಳು ಹಾಗೂ ಮ್ಯಾನೇಜ್‌ಮೆಂಟ್ ಟ್ರೈನಿ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಟ್ಟು 4135 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಬ್ಯಾಂಕುಗಳ ಸಿಬ್ಬಂದಿ ನೇಮಕ (Bank Staff Recrutiment) ಪ್ರಕ್ರಿಯೆಯನ್ನು ನಡೆಸುವ ಐಬಿಪಿಎಸ್ (IBPS) ಮತ್ತೆ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ, 11 ಬ್ಯಾಂಕುಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಇದೀಗ ಪ್ರೊಬೆಷನರಿ ಅಧಿಕಾರಿಗಳು, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತರು ಹಾಹೂ ಅರ್ಹರು ಈ ನೇಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. 

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)  ಪ್ರೊಬೇಷನರಿ ಆಫೀಸರ್ಸ್ (probationary Officers), ಮ್ಯಾನೇಜ್‌ಮೆಂಟ್ ಟ್ರೈನೀ (Management Trainee) ಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಬರೋಬ್ಬರಿ 4,135 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಐಬಿಪಿಎಸ್ (Institute Of Banking Personal Selection) ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಬಿಪಿಎಸ್‌ (Institute Of Banking Personal Selection)ನ ಅಧಿಕೃತ ವೆಬ್‌ಸೈಟ್ ibps.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಬೇಕು. ಅಂದಹಾಗೇ ಐಬಿಪಿಎಸ್ (Institute Of Banking Personal Selection) ನ ಅರ್ಜಿ ಪ್ರಕ್ರಿಯೆಯು ನವೆಂಬರ್ 10 ರಂದು ಕೊನೆಗೊಳ್ಳುತ್ತದೆ. 

ಇನ್ನು ಐಬಿಪಿಎಸ್ (Institute Of Banking Personal Selection) ನೇಮಕಾತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು,  ತಾವು ರಿಜಿಸ್ಟರ್ ಮಾಡಿಕೊಂಡ ದಿನಾಂಕದೊಳಗೆ ಪದವೀಧರ (Degree Holder) ನೆಂದು ಮಾನ್ಯ ವಿವಿಯಿಂದ ಪಡೆದ ಅಂಕಪಟ್ಟಿ/ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು. ಜೊತೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ  ಶೇಕಡಾವಾರು ಅಂಕಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ 20 ರಿಂದ 30 ವರ್ಷದೊಳಗಿರಬೇಕು. (02.10.1991 ಕ್ಕಿಂತ ಮೊದಲು ಮತ್ತು 01.10.2001ರ ನಂತರ ಜನಿಸಿದವರು ಅರ್ಜಿ ಸಲ್ಲಿಸುವಂತಿಲ್ಲ)

ಈ ಐಬಿಪಿಎಸ್ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಪರೀಕ್ಷೆಗಳನ್ನು ಎದುರಿಸ ಬೇಕಾಗುತ್ತದೆ. ಪ್ರಾಥಮಿಕ ಪರೀಕ್ಷೆ (Preliminary Exam)  ಹಾಗೂ ಮುಖ್ಯ ಪರೀಕ್ಷೆ (Main Exam) ಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ.  ಮೇನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಯ ಎಲ್ಲಾ ಮೂರು ಹಂತಗಳಲ್ಲಿ ಉತ್ತೀರ್ಣರಾದವರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ತಾತ್ಕಾಲಿಕವಾಗಿ ಆಯ್ಕೆಯಾದವರನ್ನು ಐಬಿಪಿಎಸ್ (Institute Of Banking Personal Selection) ಅಡಿಯಲ್ಲಿ ಭಾಗವಹಿಸುವ ಯಾವುದಾದರೂ ಒಂದು ಬ್ಯಾಂಕ್  ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ 

ಐಬಿಪಿಎಸ್‌ನ ಒಟ್ಟು 4,135 ಪ್ರೊಬೆಷನರಿ ಆಫೀಸರ್ಸ್ (probationary Officers) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕವನ್ನು ಪಾವತಿಸಲು ನವೆಂಬರ್ 10 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳು ಒಂದೇ ತಿಂಗಳಿಗೆ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. 
 

ಡಿಸೆಂಬರ್ 4 ಮತ್ತು 11 ರಂದು ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Preliminary Exam) ನಡೆಯಲಿದೆ. ಆನಂತರ ಡಿಸೆಂಬರ್ 2021 ಅಥವಾ ಜನವರಿ 2022ರೊಳಗೆ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಆ ಬಳಿಕ ಜನವರಿ/ ಫೆಬ್ರವರಿ 2022 ರೊಳಗೆ ಆನ್‌ಲೈನ್ ಮೂಲಕ ಮುಖ್ಯ ಪರೀಕ್ಷೆಯ ಫಲಿತಾಂಶ ಬರುವ ಸಾಧ್ಯತೆಯಿದೆ. 

ಮುಖ್ಯ ಪರೀಕ್ಷೆ (Main Exam) ನಲ್ಲಿ ಪಾಸ್ ಆದವರನ್ನು  ಶಾರ್ಟ್‌ಲಿಸ್ಟ್ (Short List) ಮಾಡಲಾಗುತ್ತದೆ. ಆಯ್ದ  ಅಭ್ಯರ್ಥಿಗಳನ್ನು ಫೆಬ್ರವರಿ/ ಮಾರ್ಚ್ 2022 ರೊಳಗೆ ಸಂದರ್ಶನ (Interview)ಕ್ಕೆ ಕರೆಯಲಾಗುವುದು. ನಂತರ ಏಪ್ರಿಲ್ 2022ಕ್ಕೆ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಸೇವೆಗೆ ನಿಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ

PREV
click me!

Recommended Stories

ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 13,217 ಹುದ್ದೆಗಳಿಗೆ ಅರ್ಜಿ ಆಹ್ವಾನ
6589 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SBI: ಕೊನೆ ದಿನಾಂಕ, ಆಯ್ಕೆ ವಿಧಾನ ಹೀಗಿದೆ