EXIM Bank Recruitment 2022: ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Feb 28, 2022, 7:04 PM IST

ಭಾರತೀಯ ಎಕ್ಸಿಮ್ ಬ್ಯಾಂಕ್  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 25 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿದೆ. 


ಬೆಂಗಳೂರು(ಫೆ.28): ಭಾರತೀಯ ಎಕ್ಸಿಮ್ ಬ್ಯಾಂಕ್ (Export-Import Bank of India - EXIM)ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 25 ಮ್ಯಾನೇಜ್‌ಮೆಂಟ್ ಟ್ರೈನಿ (Management Trainee) ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು  ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್‌ತಾಣ https://www.eximbankindia.in/ ಗೆ ಭೇಟಿ ನೀಡಿ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಎಕ್ಸಿಮ್ ಬ್ಯಾಂಕ್ (EXIM bank) ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಕನಿಷ್ಠ 60% ಪಡೆದಿರಬೇಕು. ಹಣಕಾಸು ವಿಷಯದಲ್ಲಿ MBA/ PGDBA ಮಾಡಿರಬೇಕು ಅಥವಾ CA (Chartered Accountant ) ಮಾಡಿರಬೇಕು. 

Tap to resize

Latest Videos

undefined

ವರ್ಗಾನುಸಾರ ಹುದ್ದೆಯ ವಿವರ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ವರ್ಗಾನುಸಾರ ಹುದ್ದೆಗಳನ್ನು ವಿಂಗಡಣೆ ಮಾಡಲಾಗಿದೆ.
ಕಾಯ್ದಿರಿಸದ (Unreserved) – 13
ಪರಿಶಿಷ್ಟ ಜಾತಿ (SC) – 4
ಪರಿಶಿಷ್ಟ ಪಂಗಡಗಳು (ST) – 2
ಇತರೆ ಹಿಂದುಳಿದ ವರ್ಗ (OBC) – 6
ಆರ್ಥಿಕವಾಗಿ ಹಿದುಳಿದ ವರ್ಗ (EWS) – 2
ವಿಶೇಷ ಚೇತನ (PWD) – 1

IRCON RECRUITMENT 2022: ಇಂಜಿನಿಯರಿಂಗ್ ಪದವೀಧರರನ್ನು ಆಹ್ವಾನಿಸಿದ ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ

ಅರ್ಜಿ ಶುಲ್ಕ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಒಬಿಸಿ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ ಮತ್ತು SC/ST/PWD/EWS  ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಪಡಿಲಾಗಿದೆ.

ವಯೋಮಿತಿ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ.
UR/EWS – 35 years
SC/ST – 40 years
OBC – 38 years

ಆಯ್ಕೆ ಪ್ರಕ್ರಿಯೆ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ, EXIM ಬ್ಯಾಂಕ್ ಲಿಖಿತ ಪರೀಕ್ಷೆಯನ್ನು ಬರುವ ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಮತ್ತು ವಿವಿಧ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದೆ.

Indian Navy Recruitment 2022: ನೌಕಾದಳದ SSC ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ವೇತನ ವಿವರ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 55,000 ರೂ ಸ್ಟೈಪೆಂಡ್ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್  https://www.eximbankindia.in/ ಗೆ ಭೇಟಿ ನೀಡಿ ರಿಜಿಸ್ಟ್ರೇಶನ್ ಗೆ ಈ ಲಿಂಕ್ ಕ್ಲಿಕ್ ಮಾಡಿ http://ibps.sifyitest.com/iebmtfeb22/ . ಆಸಕ್ತರು ಮಾರ್ಚ್ 14ರೊಳಗೆ ಅರ್ಜಿ ಸಲ್ಲಿಸಿ.

click me!