Canara Bank Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published May 5, 2022, 10:19 AM IST

ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ 12 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.  ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ. 20 ಕೊನೆಯ ದಿನವಾಗಿದೆ. 


ಬೆಂಗಳೂರು (ಮೇ.5): ಕೆನರಾ ಬ್ಯಾಂಕ್ (Canara Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಉಪ ವ್ಯವಸ್ಥಾಪಕ (Deputy Manager), ಸಹಾಯಕ ವ್ಯವಸ್ಥಾಪಕ (Assistant Manager), ಸೇರಿ ಒಟ್ಟು 12 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ.20 ಕೊನೆಯ ದಿನವಾಗಿದೆ. ಪ್ರಮುಖ ಅಂಶವೆಂದರೆ ಮೇಲಿನ ಎಲ್ಲಾ ಪೋಸ್ಟ್‌ಗಳಿಗೆ, ಅಭ್ಯರ್ಥಿಗಳು ಕಂಪ್ಯೂಟರ್ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ https://www.canmoney.in/ ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 12 ಹುದ್ದೆಗಳ ಮಾಹಿತಿ ಇಂತಿದೆ
ಡೆಪ್ಯುಟಿ ಮ್ಯಾನೇಜರ್ : 2 ಹುದ್ದೆಗಳು
ಅಸಿಸ್ಟೆಂಟ್ ಮ್ಯಾನೇಜರ್ ,  ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 2  ಹುದ್ದೆಗಳು
ಸಹಾಯಕ ವ್ಯವಸ್ಥಾಪಕ ಬ್ಯಾಕ್ ಆಫೀಸ್: 1 ಹುದ್ದೆ
ಕಾಂಟ್ರಾಕ್ಟ್ Kyc/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 2 ಹುದ್ದೆಗಳು
ಡೆಪ್ಯುಟಿ ಮ್ಯಾನೇಜರ್ ಬ್ಯಾಕ್ ಆಫೀಸ್(2): 2 ಹುದ್ದೆಗಳು
ಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 2 ಹುದ್ದೆಗಳು
ಅಸಿಸ್ಟೆಂಟ್ ಮ್ಯಾನೇಜರ್ -ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 1 ಹುದ್ದೆ 

Tap to resize

Latest Videos

undefined

SECR Apprentice Recruitment 2022 ರೈಲ್ವೆ ಇಲಾಖೆ ಸೇರ ಬಯಸುವವರಿಗೆ ಸುವರ್ಣಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ / ಇನ್‌ಸ್ಟ್ರುಮೆಂಟೇಶನ್ ಅಥವಾ ಎಂಸಿಎಯಲ್ಲಿ  BE / B Tech, ಪದವಿ ಅಥವಾ MCA ಮಾಡಿರಬೇಕು. ಪದವಿಯಲ್ಲಿ ಶೇ.50 ಅಂಕಗಳು ಪಡೆದಿರಬೇಕು.

ವಯೋಮಿತಿ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಡೆಪ್ಯುಟಿ ಮ್ಯಾನೇಜರ್-ಬ್ಯಾಕ್ ಆಫೀಸ್: 22 ರಿಂದ 30 ವರ್ಷದ ಒಳಗಿರಬೇಕು
ಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 20ರಿಂದ 28 ವರ್ಷದ ಒಳಗಿರಬೇಕು
ಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್ (1): 20ರಿಂದ 28 ವರ್ಷದ ಒಳಗಿರಬೇಕು
ಅಸಿಸ್ಟೆಂಟ್ ಮ್ಯಾನೇಜರ್ -ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 22 ರಿಂದ 30 ವರ್ಷದ ಒಳಗಿರಬೇಕು

India's Unemployment Rate ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳ!

ಆಯ್ಕೆ ಪ್ರಕ್ರಿಯೆ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು  ಶಾರ್ಟ್ ಲಿಸ್ಟ್ ಮಾಡಿ ಬಳಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ವೇತನ ವಿವರ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹34000 ರಿಂದ ₹44000 ತನಕ ವೇತನ ದೊರೆಯಲಿದೆ.

SAI Recruitment 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ

ಅರ್ಜಿ ಸಲ್ಲಿದಬೇಕಾದ ವಿಳಾಸ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಮೇ. 20 ಕ್ಕೂ ಮುನ್ನ ಸ್ಪೀಡ್ ಪೊಸ್ಟ್ ಮೂಲಕ ಸಲ್ಲಿಸಬೇಕು.
THE GENERAL MANAGER,
HR DEPARTMENT,
CANARA BANK SECURITIES LTD,
7TH FLOOR,
MAKER CHAMBER III NARIMAN POINT,
MUMBAI – 400021. 

click me!