Bank of India Recruitment 2022 ವಿವಿಧ 696 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

By Suvarna NewsFirst Published Apr 25, 2022, 11:05 AM IST
Highlights

ಬ್ಯಾಂಕ್ ಆಫ್​ ಇಂಡಿಯಾ   ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು  696 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ10 ಕೊನೆಯ ದಿನವಾಗಿದೆ.

ಬೆಂಗಳೂರು(ಏ.25): ಬ್ಯಾಂಕ್ ಆಫ್​ ಇಂಡಿಯಾ (Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು  696 ವಿವಿಧ ವಿಭಾಗದ ಅಧಿಕಾರಿ (Officer) ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ10, 2022 ಆಗಿದೆ. ಅಭ್ಯರ್ಥಿಗಳು ಬ್ಯಾಂಕ್​ ಆಫ್​ ಇಂಡಿಯಾದ ಅಧಿಕೃತ ವೆಬ್​ ತಾಣ ​ www.bankofindia.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು.

ಒಟ್ಟು 696 ವಿವಿಧ ವಿಭಾಗದ ಅಧಿಕಾರಿ ಹುದ್ದೆಗಳ ಮಾಹಿತಿ ಇಂತಿದೆ:
ನಿಯಮಿತ ಹುದ್ದೆಗಳು (Regular Posts) ಒಟ್ಟು  594 ಅವುಗಳಲ್ಲಿ
ಅರ್ಥಶಾಸ್ತ್ರಜ್ಞ: 2 ಹುದ್ದೆಗಳು
ಸಂಖ್ಯಾಶಾಸ್ತ್ರಜ್ಞ: 2 ಹುದ್ದೆಗಳು
ಅಪಾಯ ನಿರ್ವಾಹಕ: 2 ಹುದ್ದೆಗಳು
ಕ್ರೆಡಿಟ್ ವಿಶ್ಲೇಷಕ: 53 ಹುದ್ದೆಗಳು
ಕ್ರೆಡಿಟ್ ಅಧಿಕಾರಿಗಳು: 484 ಹುದ್ದೆಗಳು
ತಾಂತ್ರಿಕ ಮೌಲ್ಯಮಾಪನ: 9 ಹುದ್ದೆಗಳು
ಐಟಿ ಅಧಿಕಾರಿ – ಡೇಟಾ ಸೆಂಟರ್: 42 ಹುದ್ದೆಗಳು

ಒಪ್ಪಂದದ ಆಧಾರದ ಹುದ್ದೆಗಳು ಒಟ್ಟು 102 ಅವುಗಳಲ್ಲಿ
ಮ್ಯಾನೇಜರ್ ಐಟಿ: 21 ಹುದ್ದೆಗಳು
ಹಿರಿಯ ವ್ಯವಸ್ಥಾಪಕ ಐಟಿ: 23  ಹುದ್ದೆಗಳು
ಮ್ಯಾನೇಜರ್ ಐಟಿ (ಡೇಟಾ ಸೆಂಟರ್): 6  ಹುದ್ದೆಗಳು
ಹಿರಿಯ ವ್ಯವಸ್ಥಾಪಕ ಐಟಿ (ಡೇಟಾ ಸೆಂಟರ್): 6  ಹುದ್ದೆಗಳು
ಸೀನಿಯರ್ ಮ್ಯಾನೇಜರ್ (ನೆಟ್‌ವರ್ಕ್ ಸೆಕ್ಯುರಿಟಿ): 5  ಹುದ್ದೆಗಳು
ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು): 10 ಹುದ್ದೆಗಳು
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ): 3 ಹುದ್ದೆಗಳು
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್: 6  ಹುದ್ದೆಗಳು
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್: 3 ಹುದ್ದೆಗಳು
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್: 3 ಹುದ್ದೆಗಳು
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು: 3 ಹುದ್ದೆಗಳು
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್‌ವರ್ಕ್ ವರ್ಚುವಲೈಸೇಶನ್): 4 ಹುದ್ದೆಗಳು
ಮ್ಯಾನೇಜರ್ (ಡೇಟಾಬೇಸ್ ಎಕ್ಸ್ಪರ್ಟ್): 5 ಹುದ್ದೆಗಳು
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ): 2 ಹುದ್ದೆಗಳು
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್): 2 ಹುದ್ದೆಗಳು

ICAR RECRUITMENT 2022 ಕೃಷಿ ವಿಜ್ಞಾನ ಕೇಂದ್ರದಲ್ಲಿ IT ವೃತ್ತಿಪರ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ  ಹುದ್ದೆಗೆ ಅನುಸಾರವಾಗಿ M.Sc, MCA, BE, B.Tech,CA, ICWA, PGDM,MBA ಪದವಿ , ಸ್ನಾತಕೋತ್ತರ ಪದವಿ ಮಾಡಿರಬೇಕು.

ಕೆಲಸದ ಅನುಭವ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 10 ವರ್ಷಗಳವರೆಗೆ ಅನುಭವ ಹಪೊಂದಿರಬೇಕು.

ವಯೋಮಿತಿ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ವಯೋಮಿತಿ ಹೊಂದಿರಬೇಕು.
ಅರ್ಥಶಾಸ್ತ್ರಜ್ಞ 28-35
ಸಂಖ್ಯಾಶಾಸ್ತ್ರಜ್ಞ 28-35
ಅಪಾಯ ನಿರ್ವಾಹಕ 28-35
ಕ್ರೆಡಿಟ್ ವಿಶ್ಲೇಷಕ 30-38
ಕ್ರೆಡಿಟ್ ಅಧಿಕಾರಿಗಳು 20-30
ಟೆಕ್ ಅಪ್ರೈಸಲ್ 25-35
IT ಅಧಿಕಾರಿ – ಡೇಟಾ ಸೆಂಟರ್ 20-30
ಮ್ಯಾನೇಜರ್ ಐಟಿ 28-35
ಹಿರಿಯ ವ್ಯವಸ್ಥಾಪಕ ಐಟಿ 28-37
ಮ್ಯಾನೇಜರ್ IT (ಡೇಟಾ ಸೆಂಟರ್) 28-35
ಹಿರಿಯ ವ್ಯವಸ್ಥಾಪಕ IT (ಡೇಟಾ ಸೆಂಟರ್) 28-37
ಹಿರಿಯ ವ್ಯವಸ್ಥಾಪಕ (ನೆಟ್‌ವರ್ಕ್ ಭದ್ರತೆ) 28-37
ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) 28-37
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು 28-35
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್‌ವರ್ಕ್ ವರ್ಚುವಲೈಸೇಶನ್) 28-35
ಮ್ಯಾನೇಜರ್ (ಡೇಟಾಬೇಸ್ ತಜ್ಞ) 28-35
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) 28-35
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) 28-35

ಜೊತೆಗೆ OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು PWBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅಕ್ಷಯ ತೃತೀಯದಂದು ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿಸಿ, ಮುಸ್ಲಿಂ ವರ್ತಕರ ವಿರುದ್ಧ

ಅರ್ಜಿ ಶುಲ್ಕ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PWD ಅಭ್ಯರ್ಥಿಗಳು ₹175, ಸಾಮಾನ್ಯ ಮತ್ತು  ಇತರ ಎಲ್ಲಾ ಅಭ್ಯರ್ಥಿಗಳು ₹850 ಪಾವತಿಸಬೇಕು. 

ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಬಹುದು.

ವೇತನ ವಿವರ: ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹36000 ರಿಂದ ₹89890ರವರೆಗೆ ವೇತನ ದೊರೆಯಲಿದೆ.

click me!