ಬೆಂಗಳೂರು(ಜ.12): ಬ್ಯಾಂಕ್ ಆಫ್ ಬರೋಡ (Bank of Baroda) ಖಾಲಿ ಇರುವ 198 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಪದವಿ ಪಾಸಾಗಿರುವ ಅಭ್ಯರ್ಥಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಆಸಕ್ತರು ಬ್ಯಾಂಕ್ ಆಫ್ ಬರೋಡದ ಅಧಿಕೃತ ವೆಬ್‌ಸೈಟ್ www.bankofbaroda.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.
ಒಟ್ಟು 198 ಹುದ್ದೆಗಳ ವಿವರ ಇಲ್ಲಿದೆ
ಮುಖ್ಯ ಕಾರ್ಯತಂತ್ರ -ಸ್ವೀಕೃತಿ ನಿರ್ವಹಣೆ, ಚಿಲ್ಲರೆ ವ್ಯಾಪಾರ, MSME, ಕೃಷಿ ಸಾಲಗಳು -1
ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್ - 1
ಮುಖ್ಯ ಯೋಜನೆ ಮತ್ತು ಪ್ರಕ್ರಿಯೆ- ಸ್ವೀಕಾರಾರ್ಹ ನಿರ್ವಹಣೆ -1
ರಾಷ್ಟ್ರೀಯ ಸ್ವೀಕೃತಿ ವ್ಯವಸ್ಥಾಪಕ - 3
ವಲಯ ಸ್ವೀಕೃತಿ ವ್ಯವಸ್ಥಾಪಕ -21
MIS ಮ್ಯಾನೇಜರ್ - 4
ದೂರು ನಿರ್ವಾಹಕ - 1
ಪ್ರಕ್ರಿಯೆ ನಿರ್ವಾಹಕ - 4
ಸಹಾಯಕ ಉಪಾಧ್ಯಕ್ಷ - ಕಾರ್ಯತಂತ್ರ ನಿರ್ವಾಹಕ - 1
ಏರಿಯಾ ಸ್ವೀಕೃತಿಯ ಮ್ಯಾನೇಜರ್ - 50
ಉಪಾಧ್ಯಕ್ಷ - ಕಾರ್ಯತಂತ್ರ ನಿರ್ವಾಹಕ - 3
ಉಪಾಧ್ಯಕ್ಷ - ಕಾರ್ಯತಂತ್ರ ನಿರ್ವಾಹಕ - 3
ವೆಂಡರ್ ಮ್ಯಾನೇಜರ್ - 3
ಅನುಸರಣೆ ವ್ಯವಸ್ಥಾಪಕ - 1
ಪ್ರಾದೇಶಿಕ ಸ್ವೀಕೃತಿ ವ್ಯವಸ್ಥಾಪಕ -48
undefined
ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್ ಬರೋಡದ ಖಾಲಿ ಇರುವ 198 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
SOUTH CENTRAL RAILWAY RECRUITMENT 2022: ಕ್ರೀಡಾ ಕೋಟದಡಿ SSLC, PUC ಪಾಸಾದವರಿಗೆ ಉದ್ಯೋಗವಕಾಶ
ವಯೋಮಿತಿ: ಬ್ಯಾಂಕ್ ಆಫ್ ಬರೋಡದ ಖಾಲಿ ಇರುವ 198 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಬ್ಯಾಂಕ್ ಆಫ್ ಬರೋಡಾ ನೇಮಕಾತಿಯ ಅಧಿಸೂಚನೆ ಪ್ರಕಾರ ಇರಬೇಕು.
ಅರ್ಜಿ ಶುಲ್ಕ: ಬ್ಯಾಂಕ್ ಆಫ್ ಬರೋಡದ ಖಾಲಿ ಇರುವ 198 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC/ST/PWD- 100 ರೂ., ಸಾಮಾನ್ಯ/ಒಬಿಸಿ/EWS- 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್ ಬರೋಡದ ಖಾಲಿ ಇರುವ 198 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ: ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಮಾಡಲು ರೆಡಿಯಾಗಿರಬೇಕು.
ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ ಹುದ್ದೆಗಳ ಭರ್ತಿಗೆ ಕರೆ ನೀಡಿದ BOB
ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ ಹುದ್ದೆಗಳ ಭರ್ತಿಗೆ ಕರೆ ನೀಡಿದ BOB: ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಗುತ್ತಿಗೆ ಆಧಾರದ ಮೇಲೆ ಸಂಪತ್ತು ನಿರ್ವಹಣಾ ಸೇವೆಗಳ (Wealth Management Services) ವಿಭಾಗದಲ್ಲಿ ಖಾಲಿ ಇರುವ 58 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಿ.