ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಏ.22): ಬಳ್ಳಾರಿ (Ballari) ಜಿಲ್ಲೆಯ ಕುರುಗೋಡು ಮತ್ತು ಸಂಡೂರು ತಾಲೂಕಿನಲ್ಲಿ ಅಕಾಲಿಕ ಮಳೆ (Untimely rains) ಸೃಷ್ಟಿಸಿದ ಅವಾಂತರ ಒಂದೇಡಲ್ಲ. ಒಂದು ಕಡೆ ಲಕ್ಷಾಂತರ ರೂಪಾಯಿ ಮೌಲ್ಯದ ಕೋಳಿ ಫಾರಂ (poultry farm) ಶೆಡ್ಗಳು ನೆಲ್ಲಕ್ಕೂರುಳಿದ್ರೇ ಮತ್ತೊಂದು ಕಡೆ ಹತ್ತಕ್ಕೂ ಹೆಚ್ಚು ಕಾರುಗಳ ಮೇಲೆ ಮರಗಳು ಬಿದ್ದ ಪರಿಣಾಮ ಕಾರುಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ.
undefined
ಗುಡುಗು ಸಹಿತ ಮಳೆಗಿಂತ ಗಾಳಿಯೇ ಹೆಚ್ಚು: ಕುರುಗೋಡು ತಾಲೂಕಿನಲ್ಲಿ ಸುರಿದ ಆಲಿಕಲ್ಲು ಮಳೆ ಮತ್ತು ಗಾಳಿಗೆ ನೆಲಕ್ಕುರುಳಿದ ಐದಕ್ಕೂ ಹೆಚ್ಚು ಕೋಳಿ ಫಾರಂ ಶೆಡ್ಗಳು ಸಂಪೂರ್ಣವಾಗಿ ನೆಲಕ್ಕೆ ಉರುಳಿವೆ. ಪರಿಣಾಮ ಹತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.
ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದ ದೇವರಮನಿ ಹೊನ್ಬೂರು ಸ್ವಾಮಿ ಯವರ ಐದು, ಕುರಬರು ಭೊಗಪ್ಪ ಮತ್ತು ಜಡಪ್ಪ ತಲಾ ಒಂದು ಕೋಳಿ ಶೆಡ್ ನಾಶವಾಗದ್ದು ಐವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗ್ತಿದೆ. ಈಗಾಗಲೇ ಕೊರೊನಾ ಹೊಡೆತಕ್ಕೆ ಕಳೆದ ಎರಡು ವರ್ಷಗಳಿಂದ ಕೋಳಿ ಸಾಕಾಣಿಕೆ ಬಿಜಿನೆಸ್ ಸಾಕಷ್ಟು ನಷ್ಟದ ಸುಳಿಯಲ್ಲಿದೆ ಇದೀಗ ಅಕಾಲಿಕ ಮಳೆ ಮತ್ತೊಮ್ಮೆ ಕೋಳಿ ಫಾರಂ ಮಾಲೀಕರನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಇನ್ನೂ ಇಷ್ಟೆಲ್ಲ ಅವಾಂತರ ನಡೆದ್ರೂ ಯಾವೊಬ್ಬ ಅಧಿಕಾರಿಯೂ ಇತ್ತ ತಲೆ ಹಾಕದೇ ಇರೋದು ಕೂಡ ಫಾರಂ ಮಾಲೀಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ
ಎಲ್ಲೆಂದರಲ್ಲಿ ಹಾರಿದ ಕೋಳಿಗಳು: ಮಳೆ ಗಾಳಿಗೆ ಫಾರಂ ನ ಶೆಡ್ ಹಾರಿ ಹೋಗ್ತಿದ್ದಂತೆ ಕೋಳಿಗಳು ಸಂಪೂರ್ಣವಾಗಿ ಹೆದರಿ ದಿಕ್ಕಾಪಾಲಾಗಿ ಓಡಿ ಹೋಗಿವೆ. ಬಹುತೇಕ ಕೋಳಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ ಇನ್ನೂ ಕೆಲವು ಕೋಳಿಗಳು ಶಿಫ್ಟ್ ಮಾಡೋ ವೇಳೆ ಸಾವನ್ನಪ್ಪಿವೆ. ಸಾವನ್ನಪ್ಪಿರೋ ಕೋಳಿಯನ್ನು ಉಚಿತವಾಗಿ ಕೊಡ್ತೇನೆ ಎಂದ್ರೂ ಖರೀದಿ ಮಾಡೋರಿಲ್ಲ ಯಾಕಂದ್ರೇ ಸತ್ತ ಕೋಳಿಯನ್ನು ಯಾರು ಕೂಡ ತಿನ್ನೋದಿಲ್ಲವಂತೆ ಹೀಗಾಗಿ ಮಾಲೀಕರಿಗೆ ಶೆಡ್ ನೆಲಕ್ಕೆ ಉರುಳಿರೊ ನಷ್ಟ ಒಂದು ಕಡೆಯಾದ್ರೆ ಮೃತಕೋಳಿಗಳನ್ನು ಸಂಸ್ಕಾರ ಮಾಡೋದು ಮತ್ತೊಂದಿಷ್ಡು ಖರ್ಚಿಗೆ ಕಾರಣವಾಗಿದೆ.
ಹುಬ್ಬಳ್ಳಿ ಗಲಭೆಯಲ್ಲಿ ಯಾರೇ ಇರಲಿ ಬಿಡುವ ಪ್ರಶ್ನೆಯೇ ಇಲ್ಲ Pralhad Joshi
ನುಜ್ಜುಗುಜ್ಜಾದ ಕಾರುಗಳು: ಇದಿಷ್ಟು ಕುರುಗೋಡು ತಾಲೂಕಿನ ಕತೆಯಾದ್ರೆ ಸಂಡೂರು ತಾಲ್ಲೂಕಿನಾದ್ಯಾಂತ ಗಾಳಿ ಮಳೆಗೆ ಬೃಹತ್ ಮರಗಳು ಧರೆಗೆ ಉರುಳಿವೆ. ಹೀಗಾಗಿ ಮರದಡಿ ನಿಲ್ಲಿಸಿದ್ದ ಮೂರಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ನುಜ್ಜುಗುಜ್ಜಾದ್ರೆ ಏಳಕ್ಕೂ ಹೆಚ್ಚು ವಾಹನಗಳು ಭಾಗಶಃ ಜಖಂಗೊಂಡಿದೆ. ತೋರಣಗಲ್ಲು ಬಳಿ ಇರುವ ಜಿಂದಾಲ್ ಕಾರ್ಖಾನೆಯ ಆವರಣದಲ್ಲಿಯೇ ಅತಿಹೆಚ್ಚು ಮರಗಳು ಬಿದ್ದಿದ್ದರಿಂದ ಜಿಂದಾಲ್ ನೌಕರರ ಮೂರು ಕಾರುಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ಇನ್ನೂ ಕೆಲವು ಕಡೆ ಭತ್ತದ ತೆನೆಗಳು ಭಾಗಿದ್ದು ಇನ್ನೆರಡು ದಿನ ಮಳೆ ಬಾರದೇ ಇದ್ರೇ ಸರಿ ಹೋಗಬಹುದಾಗಿದೆ. ಆದ್ರೆ ಮತ್ತೆ ಮಳೆ ಬಂದ್ರೆ ಸಂಪೂರ್ಣವಾಗಿ ಭತ್ತ ಹಾಳಾಗಲಿದೆ.