ಕಂಪ್ಲಿ ಪುರಸಭೆ ಬಿಜೆಪಿ ವಶವಾದರೆ ಅಭಿವೃದ್ಧಿಗೆ ಸಹಕಾರಿ: ಶ್ರೀರಾಮುಲು

By Web Desk  |  First Published Nov 9, 2019, 11:26 AM IST

ವಿವಿಧ ವಾರ್ಡ್‌ಗಳಲ್ಲಿ ಮತಯಾಚಿಸಿದ ಸಚಿವ ಬಿ. ಶ್ರೀರಾಮುಲು|ಹಂಪಿ ಉತ್ಸವವನ್ನು ಸರಳವಾಗಿ ಎರಡು ದಿನ ಆಚರಿಸಲಾಗುವುದು| ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ಕುರಿತು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ| ವೈದ್ಯರು ಮುಷ್ಕರದಿಂದ ಹಿಂದೆ ಸರಿಯಬೇಕು| ಆರೋಗ್ಯ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರಲಾಗುವುದು| 


ಕಂಪ್ಲಿ(ನ.9): ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕಂಪ್ಲಿ ಪುರಸಭೆ ಬಿಜೆಪಿ ವಶವಾದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 
ಶುಕ್ರವಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಶ್ರೀ ಆಂಜನೇಯ ದೇವಸ್ಥಾನ ಬಳಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು.

ಹಂಪಿ ಉತ್ಸವವನ್ನು ಸರಳವಾಗಿ ಎರಡು ದಿನ ಆಚರಿಸಲಾಗುವುದು. ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ಕುರಿತು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ. ವೈದ್ಯರು ಮುಷ್ಕರದಿಂದ ಹಿಂದೆ ಸರಿಯಬೇಕು. ಆರೋಗ್ಯ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆಯಿರುವ ವೈದ್ಯರ ನೇರ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಮತದಾರರು ಬೇರೆ ಪಕ್ಷಗಳ ಬಣ್ಣದ ಮಾತುಗಳಿಗೆ, ಆಮಿಷಗಳಿಗೆ ಮರುಳಾಗಬಾರದು. ಕಂಪ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕ ಟಿ.ಎಚ್‌. ಸುರೇಶ್‌ಬಾಬು, ಬಿಜೆಪಿ ಅಭ್ಯರ್ಥಿಗಳಾದ ಎಚ್‌. ಹೇಮಾವತಿ, ಹೂಗಾರ ರಮೇಶ್‌, ಮುಖಂಡರಾದ ಬೇರ್ಗಿ ಮಹೇಶಗೌಡ, ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ಎನ್‌. ಚಂದ್ರಕಾಂತರೆಡ್ಡಿ, ಸಿ.ಡಿ. ಮಹದೇವ, ಜ್ಯೋತಿ, ರಮೀಜಾಬಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಕಂಪ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು. ಶಾಸಕ ಜಿ. ಸೋಮಶೇಖರರೆಡ್ಡಿ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕ ಟಿ.ಎಚ್‌. ಸುರೇಶಬಾಬು ಇತರರಿದ್ದರು.

click me!