ಬಳ್ಳಾರಿ‌: ವಿಶ್ವವಿಖ್ಯಾತ ಹಂಪಿ ಉತ್ಸವದ ದಿನಾಂಕ ಘೋಷಣೆ

By Web Desk  |  First Published Nov 8, 2019, 12:30 PM IST

ಜನೆವರಿ 11 ಹಾಗೂ 12 ರಂದು ಹಂಪಿ ಉತ್ಸವ ಆಚರಣೆ|ನಾಲ್ಕು ವೇದಿಕೆಗಳ ನಿರ್ಮಾಣ|ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ ನಿರ್ಮಾಣ| ಬಸವಣ್ಣ ವೇದಿಕೆ| ವೀರುಪಾಕ್ಷ ದೇವಾಲಯ ವೇದಿಕೆ| ಸಾಸಿವೆಕಾಳು ಗಣಪ ಕಡೆ ನಾಲ್ಕು ವೇದಿಕೆಗಳ ನಿರ್ಮಾಣ|ಸ್ಥಳೀಯ ಕಲಾವಿದರಿಗೆ ಆಧ್ಯತೆ| 7 ಹೊರ ರಾಜ್ಯಗಳ ವಿಶಿಷ್ಠ ಜಾನಪದ ಕಲೆ  ಪ್ರದರ್ಶನ|


ಬಳ್ಳಾರಿ‌[ನ.8]: 2020ರ ಜನೆವರಿ 11 ಹಾಗೂ 12 ರಂದು ಎರಡು ದಿನಗಳ ಕಾಲ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಎಸ್ಪಿ ಸಿಕೆ.ಬಾಬಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಒಟ್ಟು ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ನಾಲ್ಕು ವೇದಿಕೆಗಳ ನಿರ್ಮಾಣ ಮಾಡಲಾಗುತ್ತದೆ. ಈ ಬಾರಿ ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ ನಿರ್ಮಾಣವಾಗಲಿದೆ. ಎದುರುಗಡೆ ಬಸವಣ್ಣ ವೇದಿಕೆ, ವೀರುಪಾಕ್ಷ ದೇವಾಲಯ ವೇದಿಕೆ, ಸಾಸಿವೆಕಾಳು ಗಣಪ ಕಡೆ ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಾರಿಯ ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಲಾಗುತ್ತದೆ. 7 ಹೊರ ರಾಜ್ಯಗಳ ವಿಶಿಷ್ಠ ಜಾನಪದ ಕಲೆ  ಪ್ರದರ್ಶನವಾಗಲಿದೆ ಎಂದು ಹೇಳಿದ್ದಾರೆ. 

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 4 ಕೋಟಿ ಅನುದಾನ ಕೇಳಿದ್ದೇವೆ. ಹಂಪಿ ಬೈ ನೈಟ್ ಕೂಡ ಮಾಡಲಾಗುತ್ತದೆ. ದಸರಾ ಮಾದರಿಯಲ್ಲಿ ಲೈಟಿಂಗ್ ಸೆಟ್ ಹಾಕುತ್ತೇವೆ. ಉಪಚುನಾವಣೆಯ ನೀತಿ ಸಂಹಿತೆ ಬರೋದರೊಳಗಡೆ ನಾವು ಟೆಂಡರ್ ಕಾಲ್ ಮಾಡಿದ್ದೇವೆ. ಚುನಾವಣೆ ಮುಗಿದ ನಂತರ ಫೈನಲ್ ಮಾಡುತ್ತೆವೆ ಎಂದು ಹೇಳಿದ್ದಾರೆ. 

ಇದೇ ವೇಳೆ ಮಾತನಾಡಿದ ಸಿಕೆ. ಬಾಬಾ ಅವರು, ಹಂಪಿ ಉತ್ಸವದಲ್ಲಿ ಭದ್ರತೆಯು ನಮ್ಮ ಹೊಣೆಯಾಗಿದೆ. ಯಾವುದೇ ಸಮಸ್ಯೆಯಾಗದ ಹಾಗೆ ಭದ್ರತೆ ಒದಗಿಸುತ್ತೇವೆ. ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳು ಇದ್ದಾರೆ. ಈ ಉತ್ಸವದಲ್ಲಿ ಬೈಕ್ ರ‍್ಯಾಲಿ, ವಿಂಟೆಂಜ್ ಕಾರ್ ರ‍್ಯಾಲಿ ಮಾಡುವ ಯೋಚನೆ ಇದೆ ಎಂದು ಹೇಳಿದ್ದಾರೆ. 

click me!