
ಬಳ್ಳಾರಿ: ಬಳ್ಳಾರಿಯಲ್ಲಿ ನಾರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ಮಧ್ಯೆ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗೆ ಬ್ಯಾನರ್ ಕಟ್ಟುತ್ತಿದ್ದ ವೇಳೆ ಸಂಭವಿಸಿದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಜನಾರ್ದನ ರೆಡ್ಡಿ ವಿರುದ್ಧ ಎಫ್ಐಆರ್ ಆಗೋವರೆಗೂ ಈ ಸ್ಥಳ ಬಿಟ್ಟು ಹೋಗಲ್ಲ, ಜನಾರ್ದನ ಮಾಡಿದ ಎಡವಟ್ಟಿನಿಂದ ಓರ್ವನ ಪ್ರಾಣ ಹೋಗಿದೆ. ಜನಾರ್ದನ ರೆಡ್ಡಿ ವಿರುದ್ಧ ಎಫ್ಐಆರ್ ಆಗೋವರೆಗೂ ಸ್ಥಳ ಬಿಟ್ಡು ಕದಲೋದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಈಗ ಒತ್ತುವರಿ ಪ್ರಕರಣದಲ್ಲಿ ಮತ್ತೊಂದು ಶಿಕ್ಷೆಯಾಗಲಿದೆ. ಈ ವಿಷಯ ಡೈವೋರ್ಟ್ ಮಾಡೋಕೆ ಗಲಭೆ ಮಾಡುತ್ತಿದ್ದಾರೆ ಎಂದು ನಾರಾ ಭರತ್ ರೆಡ್ಡಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂಭಾಗದ ವಿರುದ್ಧ ರಸ್ತೆಯ ಅಕಡೆ ಬದಿಯಲ್ಲಿ ಭರತ್ ರೆಡ್ಡಿ ಮುಕ್ಕಾಂ ಹೂಡಿದ್ದಾರೆ ಎಂದು ವರದಿಯಾಗಿದೆ.
ಒಂದೇ ಸಮಯಕ್ಕೆ ಇಬ್ಬರು ನಾಯಕರ ಸುದ್ದಿಗೋಷ್ಠಿ:
ಈ ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ಇಂದು ಒಂದೇ ಸಮಯಕ್ಕೆ ಇಬ್ಬರು ನಾಯಕರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಒಂದು ಕಡೆ ಶಾಸಕ ಭರತ್ ರೆಡ್ಡಿ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರೊಂದಿಗೆ ಸುದ್ದಿಗೋಷ್ಟಿ ನಡೆಸಲಿದ್ದರೆ, ಮತ್ತೊಂದು ಕಡೆ ಜನಾರ್ದನ ರೆಡ್ಡಿ ಶ್ರೀರಾಮುಲು ರೆಡ್ಡಿ ನಿವಾಸದ ಗ್ಲಾಸ್ ಹೌಸ್ ನಲ್ಲಿ ಸುದ್ದಿಗೋಷ್ಟಿ ಮಾಡಲಿದ್ದಾರೆ. ಇಬ್ಬರು ಒಂದೇ ಸಮಯ ಅಂದರೆ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಢಿ ನಡೆಸಲಿದ್ದಾರೆ.
ಇದನ್ನೂ ಓದಿ: ಗಣಿನಾಡು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನಾರಾ ಭರತ್ ರೆಡ್ಡಿ ನಡುವೆ ಭಾರಿ ಕಾಳಗ: ಗುಂಡಿನ ದಾಳಿಗೆ ಓರ್ವ ಬಲಿ
ನಿನ್ನೆ ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟು ಹನ್ನೆರಡು ಜನರು ಗಾಯಗೊಂಡಿದ್ದಾರೆ. ಎರಡು ಕಡೆಯ ವ್ಯಕ್ತಿಗಳಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಪೊಲೀಸರ ಮೇಲೂ ಕಲ್ಲಿನ ದಾಳಿಯಾಗಿದೆ. ಸಾವನ್ನಪ್ಪಿದ ರಾಜಶೇಖರ ಮೃತದೇಹವನ್ನು ವಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಇದನ್ನೂ ಓದಿ: ಘಾನಾ ಪ್ರವಾದಿಯ ಅಸಲಿ ಮುಖ ಬಯಲು: ಪ್ರವಾಹ ಆಗುತ್ತೆ ಅಂತ ಜನರ ದಾರಿ ತಪ್ಪಿಸಿದ ಪ್ರವಾದಿಯ ಬಂಧನ
ಬಳ್ಳಾರಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗಾಗಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ನಡೆದ ಫೈರಿಂಗ್‌ನಲ್ಲಿ ಮೃತನಾದ ಯುವಕ ರಾಜಶೇಖರ್(28) ಅವರ ಶವವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಶವಗಾರದ ಬಳಿ ಆಗಮಿಸಿದ ಮೃತ ಯುವಕ ರಾಜಶೇಖರ ತಾಯಿ ತುಳಸಿ ಅವರಿಗೆ ಪೊಲೀಸರು ಜೋರಾಗಿ ಪೆಟ್ಟಾಗಿದೆ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಶವಾಗಾರಕ್ಕೆ ಕಾಂಗ್ರೆಸ್ ಮುಖಂಡರಾದ ನಾರಾ ಪ್ರತಾಪರೆಡ್ಡಿ, ಮುಂಡರಗಿ ನಾಗರಾಜ ಭೇಟಿ ನೀಡಿದ್ದು, ಶವಾಗಾರದ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.