ತುಂಗಭದ್ರಾ ಜಲಾಶಯದಲ್ಲಿ ಅತ್ಯಧಿಕ ನೀರಿನ ಹರಿವಿದ್ದು ನೀರನ್ನು ಹೊರಬಿಟ್ಟಿರುವ ಕಾರಣ ಹಂಪಿ ಸ್ಮಾರಕಗಳು ನೀರಿನಲ್ಲಿ ಮುಳುಗಿವೆ.
ಬಳ್ಳಾರಿ [ಅ.23]: ತುಂಗಭದ್ರಾ ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಯ ಹಲವು ಸ್ಮಾರಕಗಳು ನೀರಿನಿಂದ ಆವೃತ್ತವಾಗಿವೆ.
ಇಲ್ಲಿನ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನ ಬಳಿಯ ವೈದಿಕ ಮಂಟಪ ಮುಳುಗಡೆಗೆ ಕೆಲವೇ ಅಡಿ ನೀರು ಬಾಕಿ ಇದೆ. ಯಂತ್ರೋದ್ಧಾರಕ ದೇವಸ್ಥಾನ, ರಾಮ-ಲಕ್ಷ್ಮಣ ದೇವಸ್ಥಾನಗಳು ಭಾಗಶಃ ಮುಳುಗಡೆಯಾಗಿವೆ. ರಾಮ-ಲಕ್ಷ್ಮಣ ದೇವಸ್ಥಾನ ಬಳಿಯ ಫಲ ಪೂಜೆ ಕಟ್ಟೆವರೆಗೆ ನೀರು ತುಂಬಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೋಮವಾರ ಮಧ್ಯರಾತ್ರಿಯಿಂದಲೇ ಹಂಪಿ ಪ್ರದೇಶಕ್ಕೆ ನೀರು ಹರಿದು ಬರಲಾರಂಭಿಸಿದ್ದು, ಮಂಗಳವಾರ ಸಂಜೆ ವೇಳೆಗೆ ಪ್ರಮುಖ ಸ್ಮಾರಕಗಳು ಮುಳಗಡೆಯ ಹಂತ ತಲುಪಿದ್ದವು. ಇದರಿಂದ ಹಂಪಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇತ್ತು.