ಚಲಿಸುತ್ತಿದ್ದಂತೆ ಏಕಾ ಎಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಹೊತ್ತಿ ಉರಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ (ಅ.22): ಟೆಸ್ಟ್ ಡ್ರೈವಿಂಗ್ ಮಾಡಲು ತಂದಿದ್ದ ಸ್ಪೋರ್ಟ್ ಕಾರಿನ ಎಂಜಿನ್ ಬಿಸಿಯಾದ ಪರಿಣಾಮ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಬಳ್ಳಾರಿಯ ಜಿಲ್ಲೆಯ ಹೊರವಲಯದ ಬೈಪಾಸ್ ರಸ್ತೆಯಲ್ಲಿ ತಡರಾತ್ರಿ ಸ್ಫೋರ್ಟ್ಸ್ ಕಾರು ಭಾರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಟೆಸ್ಟ್ ಡ್ರೈವಿಂಗ್ ಮಾಡುತ್ತಿದ್ದಂತೆಯೆ ಬೆಂಕಿ ಹತ್ತಿದ್ದು, ಕಾರಿನಲ್ಲಿದ್ದ ಇಬ್ಬರು ತಕ್ಷಣವೇ ಕೆಳಕ್ಕೆ ಇಳಿದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಎಂಜಿನ್ ಒಳಗಿನಿಂದ ಬೆಂಕಿ ಹೊತ್ತಿದ್ದು, ಕ್ಷಣಾರ್ಧದಲ್ಲಿ ಅಗ್ನಿಯ ಜ್ವಾಲೆ ಸಂಪೂರ್ಣ ಕಾರಿಗೆ ಆವರಿಸಿಕೊಂಡು ಕಾರು ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದ್ದಾರೆ.