ಯಾವುದೇ ಕಾರಣಕ್ಕೂ ಟಿಬಿ ಡ್ಯಾಂನಿಂದ ಪಾವಗಡಕ್ಕೆ ನೀರು ಕೊಡಲ್ಲ

By Web Desk  |  First Published Oct 23, 2019, 9:19 AM IST

ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ನೀರು ಕೊಡಬಾರದು| ಪಕ್ಷಭೇದ ಮರೆತು ಆಗ್ರಹಿಸಿದ ಎಲ್ಲ ಶಾಸಕರು, ಸಂಸದರು| ತುಂಗಭದ್ರಾ ಜಲಾಶಯದಿಂದ ಜಿಲ್ಲೆಗೆ ಎಷ್ಟಾದರೂ ನೀರು ಕೊಡಿ| ಆದರೆ, ಬೇರೆ ಜಿಲ್ಲೆಗೆ ನೀರು ಕೊಡಲು ನಾವು ಒಪ್ಪುವುದಿಲ್ಲ| ನಮ್ಮ ಜಿಲ್ಲೆಗೆ ನೀರಿನ ಅಭಾವವಿದೆ| ಬೇರೆ ಜಿಲ್ಲೆಗೆ ನೀರು ಕೊಡುವುದು ಬೇಡ|


ಬಳ್ಳಾರಿ[ಅ.23]: ಯಾವುದೇ ಕಾರಣಕ್ಕೂ ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ನೀರು ಕೊಡಬಾರದು ಎಂದು ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಪಕ್ಷಭೇದ ಮರೆತು ಆಗ್ರಹಿಸಿದ್ದಾರೆ.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತೈಮಾಸಿಕ ಸಭೆಯಲ್ಲಿ ಜಿಲ್ಲೆಯ ಸಂಸದರು ಹಾಗೂ ಶಾಸಕರು ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಜಿಲ್ಲೆಗೆ ಎಷ್ಟಾದರೂ ನೀರು ಕೊಡಿ. ಆದರೆ, ಬೇರೆ ಜಿಲ್ಲೆಗೆ ನೀರು ಕೊಡಲು ನಾವು ಒಪ್ಪುವುದಿಲ್ಲ. ನಮ್ಮ ಜಿಲ್ಲೆಗೆ ನೀರಿನ ಅಭಾವವಿದೆ. ಹೀಗಿರುವಾಗ ಬೇರೆ ಜಿಲ್ಲೆಗೆ ನೀರು ಕೊಡಿ ಎಂದರೆ ಹೇಗೆ ಎಂದು ಶಾಸಕರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ, ನಾಗೇಂದ್ರ, ಎಂ.ಎಸ್‌. ಸೋಮಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಪ್ರಶ್ನಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದಕ್ಕೆ ಉಳಿದ ಜನಪ್ರತಿನಿಧಿಗಳು ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಸಚಿವ ಲಕ್ಷ್ಮಣ ಸವದಿ, ಎಲ್ಲರೂ ಸೇರಿ ಸಿಎಂ ಬಳಿ ಹೋಗೋಣ. ಅಲ್ಲಿಯೇ ಸೂಕ್ತ ನಿರ್ಧಾರಕ್ಕೆ ಬರೋಣ ಎಂದು ತಿಳಿಸಿದರು. ಇದಕ್ಕೆ ಶಾಸಕ- ಸಂಸದರು ಸಮ್ಮತಿಸಿದರು.

click me!