'ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ'

By Web Desk  |  First Published Oct 20, 2019, 2:16 PM IST

ಕಳೆದ ವರ್ಷ ಸರ್ಕಾರದ ಮೇಲೆ ಒತ್ತಡ ತಂದು ಹಂಪಿ ಉತ್ಸವ ಮಾಡಿದ್ವಿ| ಹಂಪಿ ಉತ್ಸವ ಯಾವುದೇ ಕಾರಣಕ್ಕೂ ನಿಲ್ಲಬಾರದು| ಪ್ರತಿ ವರ್ಷ ಹತ್ತು ಕೋಟಿ ರು. ಮೀಸಲಿಡಬೇಕು ಎಂದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ| ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಯತ್ನ ನಡೆಯುತ್ತಿಲ್ಲ| ಇದು ನೋವಿನ‌ ಮತ್ತು ಖಂಡನರ್ಹ ಸಂಗತಿ| 


ಬಳ್ಳಾರಿ(ಅ.20): ಕಳೆದ ವರ್ಷ ಸರ್ಕಾರದ ಮೇಲೆ ಒತ್ತಡ ತಂದು ಹಂಪಿ ಉತ್ಸವ ಮಾಡಿದ್ವಿ. ಹಂಪಿ ಉತ್ಸವ ಯಾವುದೇ ಕಾರಣಕ್ಕೂ ನಿಲ್ಲಬಾರದು. ಪ್ರತಿ ವರ್ಷ ಹತ್ತು ಕೋಟಿ ರು. ಮೀಸಲಿಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಒತ್ತಾಯಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಇದು ನೋವಿನ‌ ಮತ್ತು ಖಂಡನರ್ಹ ಸಂಗತಿಯಾಗಿದೆ ಎಂದು ಹೇಳಿದ್ದಾರೆ.  
ಅಧಿಕಾರಕ್ಕೆ ಏನೆಲ್ಲ ಮಾಡ್ತೀರಿ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿದ್ರಿ. ನಿಮ್ಮ ಸ್ವಾಭಿಮಾನಿ ಎಲ್ಲಿ ಹೋಯ್ತು ಎಂದು ನೇರವಾಗಿ ಸಚಿವ ಶ್ರೀರಾಮುಲು ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳ್ಳಾರಿಯವರು ಎರಡನೇ ದರ್ಜೆ ಪ್ರಜೆ ಅಲ್ಲ. ಮೈಸೂರು ದಸರಾ ಆಗ್ತದೆ.. ಕಿತ್ತೂರು ಉತ್ಸವ ಆಗ್ತದೆ ಹಂಪಿ ಉತ್ಸವ ಯಾಕೆ ಆಗಲ್ಲ ಎಂದ ಉಗ್ರಪ್ಪ ಅವರು, ಸೋಮಶೇಖರ್ ರೆಡ್ಡಿ ಕಳೆದ ಬಾರಿ ಉತ್ಸವಕ್ಕಾಗಿ‌ ಬಿಕ್ಷೆ ಬೇಡುತ್ತೇನೆ ಎಂದಿದ್ರು ಅದಕ್ಕೆ ಈ ಬಾರಿಯಾರಾದರೂ ಬಿಕ್ಷೆ ಬೇಡಿದ್ರಾ ಎಂದು ಜಿಲ್ಲಾಧಿಕಾರಿಗೆ ಕೇಳಿದ್ದೇನೆ ಎಂದು ಸೋಮಶೇಖರ್ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ಬೀದಿಗೆ ಇಳಿಸೋ ಅವಕಾಶ ಕಲ್ಪಿಸಬೇಡಿ. ಅನಿವಾರ್ಯ ಆದ್ರೇ ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ತ್ರಿಪುರದಲ್ಲಿ ಅನರ್ಹ ವ್ಯಕ್ತಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿದೆ. ಚುನಾವಣೆ ಆಯೋಗ ದ್ವಂದ್ವ ‌ನಿಲುವು ಪ್ರದರ್ಶಿಸುತ್ತಿದೆ. ಆಯೋಗ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಹೇಳಿದ್ದಾರೆ. 

ವಿಜಯನಗರ ಉಪಚುನಾವಣೆಗೆ ಸಂಬಂಧ ಮಾತನಾಡಿದ ಅವರು, ಹದಿನೈದು ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ.. ಸಮರ್ಥರನ್ನು ಪಕ್ಷ ಆಯ್ಕೆ ಮಾಡುತ್ತದೆ. ನಮ್ಮಲ್ಲಿ ಪಕ್ಷಕ್ಕೆ ದ್ರೋಹ ಮಾಡೋರು ಇದ್ದಾರೆ.. ಪಕ್ಷ ದ್ರೋಹಿಗಳನ್ನು ದೂರ ಇಟ್ರೇ ಬಳ್ಳಾರಿ ಗಟ್ಟಿಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

ಬಿಜೆಪಿಯಲ್ಲಿ ಲಿಂಗಾಯತರನ್ನು‌ ಕಚೇರಿಯಿಂದ ಹೊರಹಾಕಲಾಗ್ತಿದೆ. ಇದು ಬಿಜೆಪಿ ಅಂತರಿಕ ಕಚ್ಚಾಟವಾಗಿದೆ. ಜಾತಿ ಕಾರಣದಿಂದ ಪಕ್ಷ ಒಡೆದು ಹೋಗ್ತಿದೆ. ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ ಎನ್ನುವ ಗುಂಪುಗಳು ಸೃಷ್ಟಿಯಾಗಿವೆ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರದ ವಿರುದ್ಧ ವಾಗ್ವಾಳಿ ನಡೆಸಿದರು. 

ವೀರಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಂಡಮಾನ್ ‌ನಿಕೋಬಾರ್ ಜೈಲು‌ ನೋಡಿದ್ದೇನೆ. ಕಲ್ಲಿನ ಕೆತ್ತನೆ ನೋಡಿದ್ದೇನೆ. ಸಾವರ್ಕರ್ ಹೋರಾಟ ಮಾಡಿಲ್ಲವೆಂದು ನಾನು ಹೇಳಲ್ಲ.. ಅನೇಕರು ಕ್ರಾಂತಿಕಾರಿ ಹೋರಾಟ ಮಾಡಿದ್ದಾರೆ. ಹೋರಾಟ ಮಾಡಿದ್ದು ಸತ್ಯ. ಬ್ರಿಟಿಷರಿಗೆ ಸೆರಂಡರ್ ಆಗಿದ್ದು ಸತ್ಯ ಎಂದು ಹೇಳಿದ್ದಾರೆ. 

ವೀರಸಾವರ್ಕರ್ ಹುಟ್ಟು ಹಾಕಿದ ಹಿಂದೂ ಮಹಾ ಸಭಾದಲ್ಲಿ  ನಾತುರಾಮ್ ಗೋಡ್ಸೆ ಸದಸ್ಯರಾಗಿದ್ರು, ಗಾಂಧಿ ಕೊಂದ ಪ್ರಕರಣದಲ್ಲಿ ಸಾವರ್ಕರ್ ಎ.7 ಆಗಿದ್ರು, ವಾಜಪೇಯಿ ಸರ್ಕಾರದಲ್ಲಿ ಸಾವರ್ಕರ್ ಯಾಕೆ ನೆನಪಿಗೆ ಬರಲಿಲ್ಲ.. ಹಿಂದಿನ ಸರ್ಕಾರದಲ್ಲಿ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ . 
 

click me!