ಬಾಗಲಕೋಟೆ: ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

By Web Desk  |  First Published Nov 16, 2019, 3:03 PM IST

ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೊಲದಲ್ಲಿ ಕಬ್ಬು ಕೊರೆಯೋ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.


ಬಾಗಲಕೋಟೆ(ನ.16): ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೊಲದಲ್ಲಿ ಕಬ್ಬು ಕೊರೆಯೋ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಕಬ್ಬಿನ ಹೊಲದಲ್ಲಿ ಮಹಾರಾಷ್ಟ್ರದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ಅಂಬ್ಯುಲೆನ್ಸ್ ಸಿಬ್ಬಂದಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಮನಿಷಾ ಚವ್ಹಾಣ ಅವಳಿಜವಳಿ ಮಕ್ಕಳಿಗೆ ಜನ್ಮ ನೀಡಿ ಘಟನೆ ಬಾಗಲಕೋಟೆ ಜಿಲ್ಲೆಯ ಚೌಡಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

Tap to resize

Latest Videos

ಹುಬ್ಬಳ್ಳಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಮೊದಲ ಮಗು ಹೆರಿಗೆಯಾಗುತ್ತಲೇ ರಾಂಪುರ108 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳಕ್ಕೆ ತೆರಳಿದ ಆಂಬ್ಯುಲೆನ್ಸ್‌ ಸಿಬ್ಬಂದಿ ಹೊಲದಲ್ಲೇ ಎರಡನೇ ಮಗುವಿನ ಹೆರಿಗೆ ಮಾಡಿಸಿದ್ದಾರೆ. ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಸಿಬ್ಬಂದಿ ನಿಂಗಣ್ಣ ಮತ್ತು ಸದಾನಂದ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.

ಎರಡು ಮಕ್ಕಳ ಹೆರಿಗೆ ಬಳಿಕ ಬಾಣಂತಿ ಮನಿಷಾ ಹಾಗೂ ಮಕ್ಕಳನ್ನು ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ದುಡಿಯುವುದಕ್ಕೆಂದು ಮನಿಷಾ ಹಾಗೂ ಆಕೆಯ ಮತಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿದ್ದರು. ಬಾಗಲಕೋಟೆಯ ನವನಗರದಲ್ಲಿರೋ ಸಕಾ೯ರಿ ಜಿಲ್ಲಾಸ್ಪತ್ರೆ ಬಾಣಂತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

JDS, BJP ಪ್ರಚಾರ ಸ್ಟಾರ್ಟ್, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯಲ್ಲೇ ಗೊಂದಲ

click me!