ಜಮಖಂಡಿ: ಅಂಬೇಡ್ಕರ್‌ಗೆ ಅವಮಾನಿಸಿದ ಅಧಿಕಾರಿ ವಜಾಕ್ಕೆ ಆಗ್ರಹ

By Web Desk  |  First Published Nov 15, 2019, 8:16 AM IST

ಶಿಕ್ಷಣ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ| ಜಿಲ್ಲಾ ಅಂಬೇಡ್ಕರ್‌ ಸೇನೆ ಸಮಿತಿ ಪದಾಧಿಕಾರಿಗಳಿಂದ  ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿಗೆ ಮನವಿ| ಅಧಿಕಾರಿಯನ್ನ ಕೂಡಲೇ ವಜಾ ಮಾಡಬೇಕು. ಇಲ್ಲದಿದ್ದ ರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು|


ಜಮಖಂಡಿ(ನ.15): ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಅವರು ಡಾ.ಅಂಬೇಡ್ಕರ್‌ ಅವರು ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಡಾ.ಬಾಬಾಸಾಹೇಬರನ್ನು ಅವಮಾನಿಸಿದ್ದು, ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಅಂಬೇಡ್ಕರ್‌ ಸೇನೆ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳಿಗೆ ಮನವಿ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ಸಮಿತಿ ಸಂಚಾಲಕ ಸೂರಜ್‌ ಕುಡ್ರಾಣಿ ಮಾತನಾಡಿ, ಸಂವಿಧಾನವನ್ನು ಅಂಬೇಡ್ಕರವರು ಒಬ್ಬರೇ 2 ವರ್ಷ 11 ತಿಂಗಳು 9 ದಿನ ಸತತ ಪ್ರಯತ್ನದಿಂದ ಭಾರತದ ಎಲ್ಲ ಪ್ರಜೆಗಳಿಗೆ ಧರ್ಮ, ಜಾತಿ, ಆಧಾರಗಳನ್ನು ಪರಿಶೀಲಿಸಿ ಸಂವಿಧಾನ ಬರೆದು ಸಂವಿಧಾನ ಶಿಲ್ಪಿಯಾಗಿದ್ದಾರೆ. ಆದರೆ ಒಬ್ಬರೇ ಸಂವಿಧಾನ ಬರೆದಿಲ್ಲ, ವಿವಿಧ ಧರ್ಮ ಜಾತಿಗಳ ಜನರು ಸಿದ್ದಪಡಿಸಿಕೊಟ್ಟ ಸಂವಿಧಾನವನ್ನು ಸಿದ್ಧಪಡಿಸುವ ಕರ್ತವ್ಯ ಮಾತ್ರ ಅಂಬೇಡ್ಕರವರದ್ದು ಆಗಿತ್ತೆಂದು ಹೇಳುವ ಮೂಲಕ ಅವಮಾನ ಎಸಗಿ ಮಕ್ಕಳ ತಲೆಯಲ್ಲಿ ಕೋಮು ವಿಷಬೀಜ ಬಿತ್ತುವ ಹುನ್ನಾರ ಮಾಡಿದ್ದು,ದೇಶದ್ರೋಹದ ಕೆಲಸವಾಗಿದೆ. ಅವರನ್ನು ಕೂಡಲೇ ವಜಾ ಮಾಡಬೇಕು. ಇಲ್ಲದಿದ್ದ ರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವಲಿಂಗ ಗೊಂಬಗುಡ್ಡ, ಪ್ರವೀಣ ಹೋಳೆಪ್ಪಗೋಳ, ಭೀಮರಾವ ಮೀಶಿ, ಯಾಸೀನಬೀ ಸಾಗರ, ಸಂಜು,ರಾಮ,ರಾಜು, ಬಾಳು,ದೀಲಿಪ ಕಾಂಬಳೆ, ಮಹಾಂತೇಶ ಸಿಂಗೆ, ಇತರರು ಇದ್ದರು.
 

click me!