ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ಉಪರಾಷ್ಟ್ರಪತಿ!

By Web Desk  |  First Published Oct 25, 2019, 9:32 AM IST

ನರೇಂದ್ರ ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ಉಪ ರಾಷ್ಟ್ರಪತಿ, ಇದು ಪ್ರವಾಹ ಪೀಡಿತ ಜಿಲ್ಲೆಯೊಂದರ ಶಾಲೆಯಲ್ಲಿ ಮಕ್ಕಳು ಕೊಟ್ಟ ಉತ್ತರ 


ಜಮಖಂಡಿ [ಆ.25]: ನರೇಂದ್ರ ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ಉಪರಾಷ್ಟ್ರಪತಿ...! ಇದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಕೊಟ್ಟಉತ್ತರ. 

ನೆರೆಪೀಡಿತ ಪ್ರದೇಶಗಳಲ್ಲಿ ಶಾಲೆಗಳ ಪರಿಸ್ಥಿತಿಯನ್ನು ಅವಲೋಕಿಸಲು ಗುರುವಾರ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಜಮಖಂಡಿ ತಾಲೂಕಿನ ಜಂಬಗಿ ಬಿಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ ಸಂದರ್ಭದಲ್ಲಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಿಗೆ ನಮ್ಮ ದೇಶದ ರಾಷ್ಟ್ರಪತಿ ಯಾರು? ಉಪ ರಾಷ್ಟ್ರಪತಿ ಹೆಸರೇನು? ರಾಜ್ಯಪಾಲರು ಯಾರು? ಎಂಬುವುದು ಸೇರಿದಂತೆ ನಾನಾ ಪ್ರಶ್ನೆಗಳನ್ನು ಕೇಳಿದರು. ಆಗ ಕೆಲವು ವಿದ್ಯಾರ್ಥಿಗಳು ನರೇಂದ್ರ ಮೋದಿ ರಾಷ್ಟ್ರಪತಿ, ಸಿದ್ದರಾಮಯ್ಯ ನಮ್ಮ ಉಪ ರಾಷ್ಟ್ರಪತಿ ಎಂದು ಉತ್ತರಿಸಿದರು. ಮಕ್ಕಳ ಈ ಉತ್ತರದಿಂದ ಸ್ಥಳದಲ್ಲಿದ್ದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.

click me!