ಡಿಕೆಶಿಗೆ ಬೇಲ್: ಎಲ್ಲರಿಗೂ ಒಳ್ಳೆಯ ಕಾಲ, ಕೆಟ್ಟ ಕಾಲ ಬರುತ್ತೆ ಎಂದ ಡಿಸಿಎಂ

By Web Desk  |  First Published Oct 24, 2019, 11:14 AM IST

ಮಾಜಿ ಸಚಿವ ಡಿ.ಕೆ. ಶಿವಕುಮಾರಗೆ ಜಾಮೀನು ಮಂಜೂರು| ಇದರ  ಕುರಿತು ನಾನು ವೈಯಕ್ತಿಕವಾಗಿ ಏನು ಹೇಳುವುದಿಲ್ಲ ಎಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ| ಒಳ್ಳೆ ಟೈಮ್, ಕೆಟ್ಟ ಟೈಮ್ ಎಲ್ಲರಿಗೂ ಇದ್ದೆ ಇರುತ್ತದೆ| ಡಿಕೆಶಿ ನಮಗೂ ಒಬ್ಬರು ಗೆಳೆಯರು| ಅವರ ಬಗ್ಗೆ ಅವರ ಪಕ್ಷದ ಬಗ್ಗೆ ನಾನ್ಯಾಕೆ ಕಮೆಂಟ್ ಮಾಡಲಿ|


ಬಾಗಲಕೋಟೆ[ಅ.24]: ಮಾಜಿ ಸಚಿವ ಡಿ.ಕೆ. ಶಿವಕುಮಾರಅವರಿಗೆ ಜಾಮೀನು ಸಿಕ್ಕಿರುವ ಕುರಿತು ನಾನು ವೈಯಕ್ತಿಕವಾಗಿ ಏನು ಹೇಳುವುದಿಲ್ಲ. ಒಳ್ಳೆ ಟೈಮ್, ಕೆಟ್ಟ ಟೈಮ್ ಎಲ್ಲರಿಗೂ ಇದ್ದೆ ಇರುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ನಗರದಲ್ಲಿ  ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ನಮಗೂ ಒಬ್ಬರು ಗೆಳೆಯರು. ಅವರ ಬಗ್ಗೆ ಅವರ ಪಕ್ಷದ ಬಗ್ಗೆ ನಾನ್ಯಾಕೆ ಕಮೆಂಟ್ ಮಾಡಲಿ. ಅವರು ಅನರ್ಹ ಶಾಸಕರ ವಿಚಾರಣೆ ಮತ್ತೆ ಮುಂದೂಡಿರುವ ವಿಷಯ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಅನರ್ಹರಿಗೆ ನ್ಯಾಯ ಸಿಗುತ್ತದೆ ಅನ್ನುವ ವಿಶ್ವಾಸವಿದೆ ಎಂದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೂರು ವರ್ಷದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸಕ್ರಿಯವಾಗಲಿಲ್ಲ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಪ್ರಚಾರಕ್ಕೂ ಬರಲಿಲ್ಲ. ನಿನ್ನೆಯ ಚುನಾವಣೋತ್ತರ ಸಮೀಕ್ಷೆ ಬರುವ ದಿನಗಳಲ್ಲಿ ಇಡೀ ದೇಶದಲ್ಲಿ ಇರುತ್ತದೆ ಎಂದು ಮಹಾರಾಷ್ಟ್ರ ಚುನಾವಣೆ ಇಟ್ಟುಕೊಂಡು ಕಾರಜೋಳ ಮಾತನಾಡಿದರು. 

ಸರ್ಕಾರ ಇನ್ನೂ ಮೂರು ವರ್ಷಗಳ ಕಾಲ ಇದ್ದೆಇರುತ್ತದೆ, ಹೈಕಮಾಂಡ್‌ಗೆ ಬಿಎಸ್‌ವೈ ಬೇಡವಾದ ಕೂಸು ಎನ್ನುವವರಿಗೆ ನನ್ನ ಪ್ರಶ್ನೆ ಇಷ್ಟೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಬಿಎಸ್‌ವೈ ಬೇಡವಾಗಿದ್ದರೆ ಅವರನ್ಯಾಕ್ಕೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತಿದ್ದರು, ಬಿಜೆಪಿಯ ಪ್ರತಿಯೊಬ್ಬರಿಗೂ ಬಿಎಸ್‌ವೈ ಅವರು ಬೇಕಾದ ವ್ಯಕ್ತಿಯಾಗಿದ್ದಾರೆ ಎಂದರು.

ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಲಕಿ ರಸ್ತೆ ದುರಸಿಗ್ತೆ ಪತ್ರ ನಿವೇದನೆ ಮಾಡಿರುವುದಕ್ಕೆ ಅಷ್ಟೊಂದು ಮಹತ್ವ ಬೇಡ. ಅದು ಇಬ್ಬರ ಹೊಲದ ಮಾಲೀಕರ ಮಧ್ಯ ಇರುವ ಜಗಳ. ರಸ್ತೆ ವೈಯಕ್ತಿಕ ಮಾಲೀಕತ್ವದಲ್ಲಿದೆ. ರಸ್ತೆ ರೀಪೆರಿಗೆ ಮಾಲೀಕರು ಒಪ್ಪಿದರೆ ದುರಸ್ತಿ ಮಾಡಲು ಸಿದ್ಧ. ಆದರೆ ವಿನಾಕಾರಣ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

click me!