
ಬಾಗಲಕೋಟೆ(ಜ.19) ಬಂದ್‌ಗಳಿಂದ ದೂರವಿದ್ದ ಕರ್ನಾಟಕದ ಬಾಗಲಕೋಟೆ ಇದೀಗ ಬಂದ್ ಆಗುತ್ತಿದೆ. ನಾಳೆ(ಜ.20) ಬಾಗಲಕೋಟೆ ಬಂದ್‌ಗೆ ಕರೆ ನೀಡಲಾಗಿದೆ. ವಿವಿದ ದಲಿತಪರ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಡಾ.ಬಿಆರ್ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದೆ. ಜನವರಿ 20ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಸಲು ದಲಿತಪರ ಸಂಘಟನೆಗಳು ನಿರ್ಧರಿಸಿದೆ.ಇದರ ಪರಿಮಾಮ ನಾಳೆ ಬಾಗಲಕೋಟೆ ನಗರ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮುನ್ನಚ್ಚೆರಿಕಾ ಕ್ರಮವಾಗಿ ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ಬರುವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ವ್ಯಾಪ್ತಿಯಲ್ಲಿ ಮಾತ್ರ ಶಾಲೆಗಳಿಗೆ ರಜೆ ನೀಡಲಾಗಿದೆ. ಬಾಗಲಕೋಟೆ ಬಿಇಓ ಬಡದಾನಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ದಲಿತಪರ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಕಾಂಗ್ರೆಸ್ ಪಕ್ಷ, ಕನ್ನಡಪರ ಸಂಘಟನೆಗಳು, ಎಪಿಎಂಸಿ ವರ್ತಕರ ಸಂಘ, ಬೀದಿ ಬದಿ ವ್ಯಾಪಾರಸ್ಥರು, ಬಾರ್ & ರೆಸ್ಟೋರೆಂಟ್ ಮಾಲೀಕರಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜನವರ್ 20ರ ಬಾಗಲಕೋಟೆ ಬಂದ್ ಬಹುತೇಕ ಯಶಸ್ವಿಯಾಗಿ ಸಾಧ್ಯತೆ ಇದೆ. ಜನವರಿ 20ರಂದು 1 ಗಂಟೆಗೆ ಹಳೆಯ ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆ ಆಗಲಿರುವ ಪ್ರತಿಭಟನಾಕಾರರು, ಶಾಂತಿಯುತವಾಗಿ ಬಂದ್ ಆಚರಿಸಲಿದ್ದಾರೆ ಎಂದಿದೆ.
ಅಂಬೇಡ್ಕರ್‌ಗೆ ಅಮಿತ್ ಶಾ ಅವಮಾನ: ದಲಿತ ಸಂಘಟನೆಗಳಿಂದ ಪ್ರತಿಭಟನೆ, ವಿಜಯಪುರ ಬಂದ್!
ಅಮಿತ್ ಶಾ ಹೇಳಿಕೆಯಿಂದ ಆರದ ಸಿಟ್ಟು
ಸದನದಲ್ಲಿ ಮಾತನಾಡುತ್ತಾ ಅಮಿತ್ ಶಾ, ಪ್ರತಿಪಕ್ಷಗಳ ವಿರುದ್ದ ಹರಿಹಾಯ್ದಿದ್ದರು. ಈ ವೇಳೆ ಇತ್ತೀಚೆಗೆ ಪ್ರತಿಪಕ್ಷಗಳು ಅಂಬೇಡ್ಕರ್ ಹೆಸರನ್ನು ಹೆಚ್ಚು ಬಳಸುತ್ತಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್‌ಗೆ ಯಾವ ರೀತಿ ಗೌರವ ನೀಡಿತ್ತು ಅನ್ನೋದು ಎಲ್ಲರಿಗೆ ಗೊತ್ತು. ಇದೀಗ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಕೆಲವರಿಗೆ ಫ್ಯಾಶನ್ ಆಗಿದೆ ಎಂದು ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್ ಭಾರಿ ವಿರೋಧಿಸಿತ್ತು. ದೆಹಲಿ ಸೇರಿದಂತೆ ದೇಶಾದ್ಯಂತ ಅಮಿತ್ ಶಾ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಇಷ್ಟೇ ಅಲ್ಲ ಹಲವು ರಾಜ್ಯಗಳಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಚಳಿಗಾಲದ ಅಧಿವೇಶನದಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಕಿಚ್ಚು ಇದೀಗ ಮತ್ತೆ ಕಾವೇರುತ್ತಿದೆ. ಸದ್ಯ ಬಾಗಲಕೋಟೆಯಲ್ಲಿ ದಲಿತಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದೆ.