ಹುನಗುಂದದ ಹಿರೇಮಾಗಿಯಲ್ಲಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಜನತೆ

By Web Desk  |  First Published Oct 26, 2019, 1:05 PM IST

ಮಲಪ್ರಭಾ ನದಿಯಲ್ಲಿ ತಗ್ಗಿದ ನೀರು| ಹಿರೇಮಾಗಿಯಲ್ಲಿ ಪ್ರತ್ಯಕ್ಷವಾದ ಮೊಸಳೆ| ಸ್ಥಳೀಯರ ಕಾರ್ಯಾಚರಣೆ|  ಹಗ್ಗದ ಸಹಾಯದಿಂದ ಮೊಸಳೆಯನ್ನು ಕಟ್ಟಿ ಹಾಕಿದ ಗ್ರಾಮಸ್ಥರು|  ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ| ಗ್ರಾಮದಲ್ಲಿ ಇನ್ನೊಂದು ಮೊಸಳೆ ಇರುವ ಶಂಕೆ|


ಬಾಗಲಕೋಟೆ(ಅ.26): ಮಲಪ್ರಭಾ ನದಿಯಲ್ಲಿ ನೀರು ನೀರು ತಗ್ಗಿದ ಹಿನ್ನೆಲೆಯಲ್ಲಿ ಮೊಸಳೆಯೊಂದು ಗ್ರಾಮದಲ್ಲಿ ಒಳಗೆ ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

ಮಲಪ್ರಭಾ ನದಿ ನೀರು ಕಡಿಮೆಯಾದ ಪರಿಣಾಮ ಸುಮಾರು 6 ಅಡಿ ಉದ್ದದ ಮೊಸಳೆ ಗ್ರಾಮದ ಒಳಗೆ ಬಂದಿದೆ. ಇದನ್ನು ಕಂಡ ಗ್ರಾಮಸ್ಥರಲ್ಲಿ ಭಯ ಉಂಟಾಗಿತ್ತು. ಆದರೆ, ಸ್ಥಳಿಯರೇ ಸೇರಿಕೊಂಡು ಕಾರ್ಯಾಚರಣೆ ನಡೆಸುವ ಮೂಲಕ ಮೊಸಳೆಯನ್ನು ಹಗ್ಗದ ಸಹಾಯದಿಂದ ಕಟ್ಟಿ ಹಾಕಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೊಸಳೆ ಹಿಡಿದ ಗ್ರಾಮಸ್ಥರು ಬಳಿಕ ಆ ಮೊಸಳೆಯನ್ನು ಟ್ರ್ಯಾಕ್ಟರ್ ನಲ್ಲಿ ತಂದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಇನ್ನೊಂದು ಮೊಸಳೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. 

click me!