ಬಾಗಲಕೋಟೆ: ಕೆಡಿಪಿ ಸಭೆಯಲ್ಲಿ ಗದ್ದಿಗೌಡರ-ತಿಮ್ಮಾಪೂರ ನಡುವೆ ವಾಕ್ಸಮರ

By Web DeskFirst Published Oct 26, 2019, 10:44 AM IST
Highlights

ಗದ್ದಿಗೌಡರ, ತಿಮ್ಮಾಪೂರ ನಡುವೆ ಮಾತಿನ ಸಮರ| ಸರ್ಕಾರದ ಯೋಜನೆಗಳು ಕಾಗದಕ್ಕೆ ಮಾತ್ರ ಸೀಮಿತವಾಗಿವೆ ಎಂಬ ಚರ್ಚೆಗೂ ಗ್ರಾಸವಾಯಿತು| ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಬಾಗಲಕೋಟೆ ತ್ರೈಮಾಸಿಕ ಕೆಡಿಪಿ ಸಭೆ| ಮಾತಿನ ಸಮರ ಅಂತಿಮವಾಗಿ ವಾಸ್ತವಿಕ ನೆಲೆ ಗಟ್ಟಿನಲ್ಲಿ ಪರಿಶೀಲಿಸುವ ಹಂತಕ್ಕೂ ತಲುಪಿತು| 

ಬಾಗಲಕೋಟೆ(ಅ.26): ಜಿಲ್ಲೆಯಲ್ಲಿನ ಪ್ರತಿಯೊಂದು ಗ್ರಾಮ ಬಯಲು ಶೌಚ ಮುಕ್ತ ಗ್ರಾಮಗಳಾಗಿವೆ ಎಂಬ ಅಧಿಕಾರಿಗಳ ವರದಿಗೆ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪೂರ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. ಅಲ್ಲದೆ ಸರ್ಕಾರದ ಯೋಜನೆಗಳು ಕಾಗದಕ್ಕೆ ಮಾತ್ರ ಸೀಮಿತವಾಗಿವೆ ಎಂಬ ಚರ್ಚೆಗೂ ಗ್ರಾಸವಾಯಿತು.

ಶುಕ್ರವಾರ ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಬಾಗಲಕೋಟೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಂಸದ ಹಾಗೂ ವಿಧಾನ ಪರಿಷತ್‌ ಸದಸ್ಯರ ನಡುವಿನ ಮಾತಿನ ಸಮರ ಅಂತಿಮವಾಗಿ ವಾಸ್ತವಿಕ ನೆಲೆ ಗಟ್ಟಿನಲ್ಲಿ ಪರಿಶೀಲಿಸುವ ಹಂತಕ್ಕೂ ತಲುಪಿತು.

ಸಭೆಯಲ್ಲಿ ಏನಾಯಿತು?:

ಜಿಪಂ ಅಧಿ​ಕಾರಿಗಳು ಜಿಲ್ಲೆಯ 619 ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ ಎಂಬ ಹೇಳಿಕೆಯನ್ನು ಆರ್‌.ಬಿ.ತಿಮ್ಮಪೂರ ಒಪ್ಪಲಿಲ್ಲ. ಆದರೆ, ಸಂಸದ ಗದ್ದಿಗೌಡರ ಅಧಿ​ಕಾರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದರಿಂದ ಉಭಯ ನಾಯಕರ ನಡುವೆ ಮಾತಿನ ಸಮರ ಆರಂಭವಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಾವ ಗ್ರಾಮದಲ್ಲಿಯೂ ಬಯಲು ಮುಕ್ತ ಶೌಚ ನಡೆಯುತ್ತಿಲ್ಲ. ಬೇಕಾದರೆ ಯಾವುದಾದರೂ ಗ್ರಾಮಕ್ಕೆ ಬರಲು ಸಿದ್ಧನಿದ್ದೇನೆ. ಸುಳ್ಳು ಹೇಳುವುದನ್ನು ಬಿಡಿ. ಕೇವಲ ಕಾಗದದಲ್ಲಿ ಆಗಿರುವ ಶೌಚಾಲಯಗಳ ಕುರಿತು ಹೇಳಬೇಡಿ ಎಂದು ಸವಾಲು ಹಾಕಿದ ತಿಮ್ಮಾಪೂರ, ಆಗಿರುವ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಸೂಚಿಸಿದರು. ಇದಕ್ಕೆ ಶಾಸಕ ಸಿದ್ದು ಸವದಿ ಹಾಗೂ ವೀರಣ್ಣ ಚರಂತಿಮಠ ಸಹ ತಿಮ್ಮಾಪೂರ ಮಾತಿಗೆ ಬೆಂಬಲ ಸೂಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲು ಸಲಹೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ, ಘಟಕಕ್ಕೆ ನೀಡಿರುವ ಅನುದಾನ, ನೇಕಾರರ ಸೌಲಭ್ಯಗಳ ಕುರಿತು ಬುದ್ನಿ ಗ್ರಾಮದಲ್ಲಿ ಹಾಕಿರುವ ಶೆಡ್‌ಗಳ ಕುರಿತು ಆರ್‌.ಬಿ.ತಿಮ್ಮಾಪೂರ ಪ್ರಸ್ತಾಪಿಸಿ ಆಗಿರುವ ಲೋಪಗಳನ್ನು ಸರಿಪಡಿಸಲು ಸಭೆಯಲ್ಲಿದ್ದ ಸಚಿವರ ಗಮನಕ್ಕೆ ತಂದರು.
 

click me!