ಬಜಾಜ್ ಪಲ್ಸಾರ್ ಬೈಕ್‌ಗೆ ಮಾರುತಿ 800 ಎಂಜಿನ್: ಯುವಕರಿಂದ ವಿನೂತ ಬೈಕ್ ಆವಿಷ್ಕಾರ!

By Suvarna NewsFirst Published Aug 23, 2020, 2:28 PM IST
Highlights

ಮಾರುತಿ 800 ಕಾರಿನ ಎಂಜಿನ್, ರಾಯಲ್ ಎನ್‌ಫೀಲ್ಡ್ ಬೈಕ್‌ನ ಬಿಡಿ ಭಾಗ, ಟಾಟಾ ಏಸ್ ಕಾರಿನ ಕ ಬಿಡಿ ಭಾಗ, ಯಮಹಾ FZ ಬೈಕ್ ಬಿಡಿ ಭಾಗಳನ್ನು ಬಳಸಿಕೊಂಡು ವಿನೂತನ ಬೈಕ್ ನಿರ್ಮಾಣ ಮಾಡಲಾಗಿದೆ. ಇಬ್ಬರು ಯುವಕರ ಪ್ರಯತ್ನದಿಂದ ಹೊಸ ಬೈಕ್ ಎಲ್ಲರ ಗಮನಸಳೆಯುತ್ತಿದೆ. 
 

ಜಲಂಧರ್(ಆ.23):  ಬೈಕ್ ಮಾಡಿಫಿಕೇಶನ್ ಹೊಸದಲ್ಲ. ಹಳೇ ಬೈಕ್‌ಗಳಿಗೆ ಹೊಸ ರೂಪ , ಹೊಸ ಬೈಕ್‌ಗಳಿಗೂ ಯಾರೂ ಊಹಿಸಲಾಗದ ರೂಪಗಳನ್ನು ನೀಡುವುದು ಸಾಮಾನ್ಯವಾಗಿದೆ. ಆದರೆ ವಾಹನ ಮಾಡಿಫಿಕೇಶನ್ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಇಷ್ಟಾದರೂ ಹಲವರು ತಮ್ಮ ತಮ್ಮ ಬೈಕ್ ಮಾಡಿಫಿಕೇಶನ್ ಮಾಡುತ್ತಾರೆ. ಆದರೆ ಪಂಜಾಬ್‌ನ ಜಲಂಧರ್‌ನ ಇಬ್ಬರು  ಯುವಕರು ಕಾರು, ಬೈಕ್, ಮಿನಿ ಟ್ರಕ್ ಬಿಡಿ ಭಾಗಗಳನ್ನು ಬಳಸಿಕೊಂಡು ಹೊಸ ಬೈಕ್ ನಿರ್ಮಾಣ ಮಾಡಿದ್ದಾರೆ. ಇದು ದೇಶದ ಗಮನಸೆಳೆದಿದೆ.

PureEV ETrance ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಆಕ್ಟಿವಾ ಸೇರಿದಂತೆ ಎಲ್ಲಾ ಸ್ಕೂಟರ್‌ಗಿಂತ ಕಡಿಮೆ ಬೆಲೆ!

ಗೆಹ್ಲ್‌ರಾನ್ ಗ್ರಾಮದ ಕಾಲೇಜು ವಿದ್ಯಾರ್ಥಿಗಳಾದ ದೇವಿಂದರ್ ಸಿಂಗ್(20) ಹಾಗೂ ಹರಿಸಿಮ್ರನ್ ಸಿಂಗ್(18) ಈ ನೂತನ ಬೈಕ್ ನಿರ್ಮಾಣ ಮಾಡಿದ್ದಾರೆ. ಇವರಿಗೆ ಅತೀ ದೊಡ್ಡ ಹಾಗೂ ಮೋಸ್ಟ್ ಪವರ್‌ಫುಲ್ ಬೈಕ್ ನಮ್ಮಲ್ಲಿ ಇರಬೇಕು ಅನ್ನೋದು ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ. ದೇವಿಂದರ್ ಹಾರ್ಲೆ ಡಿವಿಡ್ಸನ್ ಬೈಕ್ ಖರೀದಿಸಲು ಪ್ಲಾನ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಕೈಗೂಡಲಿಲ್ಲ.

BS6 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್: ಫಸ್ಟ್ ಲುಕ್ ರಿವ್ಯೂವ್!.

ಲಾಕ್‌ಡೌನ್ ಹಾಗೂ ಕೊರೋನಾ ಕಾರಣ ಕಾಲೇಜುಗಳ ಆರಂಭ ವಿಳಂಬವಾಗಿದೆ. ಈ ಸಮಯದಲ್ಲಿ ಕಾರಿನ ಎಂಜಿನ್ ಬಳಸಿ ಬೈಕ್ ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಲಾಕ್‌ಡೌನ್ ಕಾರಣ ಸ್ಥಳೀಯ ವರ್ಕ್‌ಶಾಪ್ ಮುಚ್ಚಲಾಗಿತ್ತು. ಹೀಗಾಗಿ ಬಾಡಿಗೆಗೆ ಈ ವರ್ಕ್‌ಶಾಪ್ ಪಡೆದು ಬೈಕ್ ನಿರ್ಮಾಣ ಆರಂಭಿಸಲಾಯಿತು. 

ಹಳೇ ಮಾರುತಿ 800 ಎಂಜಿನ್, ಟಾಟಾ ಏಸ್ ಮಿನಿ ಟ್ರಕ್‌ನ ರೇಡಿಯೇಟರ್, ಕೂಲಿಂಗ್ ಫ್ಯಾನ್, ಇನ್ನು ಬಜಾಜ್ ಪಲ್ಸಾರ್ ಬೈಕ್‌ನ ಚಾಸಿ, ಮಡ್ಗಗಾರ್ಡ್, ಹ್ಯಾಂಡಲ್ ಬಾರ್, ಫ್ಯುಯೆಲ್ ಟ್ಯಾಂಕ್ ಸೇರಿದಂತೆ ಇತರ ಬಿಡಿ ಭಾಗಗಳನ್ನು ರಾಯಲ್ ಎನ್‌ಪೀಲ್ಡ್, ಕೆಟಿಎಂ ಡ್ಯೂಕ್, ಯಮಹಾ FZ ಬೈಕ್‌ನಿಂದ ಪಡೆದು ನೂತನ ಬೈಕ್ ನಿರ್ಮಾಣ ಆರಂಭಿಸಿದ್ದಾರೆ.

ಹಗಲು ರಾತ್ರಿ ಕೆಲಸ ಮಾಡಿದ ಯುವಕರು ಅದ್ಬುತ ಬೈಕ್ ನಿರ್ಮಾಣ ಮಾಡಿದ್ದಾರೆ. ಈ ಬೈಕ್‌ನ ವೇಗ 200 ಕಿ.ಮೀ.  796 ಸಿಸಿ, 3 ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿರುವ ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 20 ಕಿ.ಮೀ ಮೈಲೇಜ್ ನೀಡಲಿದೆ. ಮಾಡಿಫಿಕೇಶನ್ ನಿಯಮ ಬಾಹಿರವಾಗಿರುವ ಕಾರಣ, ಸಾರ್ವಜನಿಕ ರಸ್ತೆಯಲ್ಲಿ ಈ ಬೈಕ್ ಬಳಕೆ ಮಾಡಲು ರಿಜಿಸ್ಟ್ರೇಶನ್ ಸಾಧ್ಯವಿಲ್ಲ. ಆದರೆ ಈ ಯುವಕರ ಸಾಹಸವನ್ನು ಮೆಚ್ಚಲೇಬೇಕು.

click me!