ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ; ವ್ಯಾಗನರ್ EV ಕಾರು ಬಿಡುಗಡೆಗೆ ಮಾರುತಿ ತಯಾರಿ!

By Suvarna News  |  First Published Aug 22, 2020, 7:36 PM IST

ಭಾರತ ಸೇರಿದಂತೆ ವಿಶ್ವದಲ್ಲೇ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಬೆಲೆ ದುಬಾರಿಯಾಗಿದೆ. ಇಂಧನ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ  ಬಹುತೇಕರು ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಮಾರುತಿ ಸುಜುಕಿ ಇದೀಗ ವ್ಯಾಗನರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ.


ನವದೆಹಲಿ(ಆ.22): ಎಲೆಕ್ಟ್ರಿಕ್ ಕಾರುಗಳತ್ತ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ ಸಂದರ್ಭದಲ್ಲೇ ಮಾರುತಿ ಸುಜುಕಿ ವ್ಯಾಗನ್R ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ನಡೆಸಿತ್ತು. ಆದರೆ ಬಹುತೇಕ ಕಂಪನಿಗಳು ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿ ಭಾರತದ ಮಾರುಕಟ್ಟೆಯನ್ನು ಆಕ್ರಮಸಿಕೊಂಡಿದೆ. ಆದರೆ ಮಾರುತಿ ಸುಜುಕಿಯ ವ್ಯಾಗನರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಭಾಗ್ಯ ಕಾಣಲೇ ಇಲ್ಲ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾದಂತೆ ಇದೀಗ ಮಾರುತಿ  ವ್ಯಾಗನರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.

Photo: BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!

Tap to resize

Latest Videos

undefined

ಮಾರುತಿ ವ್ಯಾಗನರ್ ಎಲೆಕ್ಟ್ರಿಕ್ ಕಾರು ಮತ್ತೆ ರೋಡ್ ಟೆಸ್ಟ್ ನಡೆಸುತ್ತಿದೆ. ಗುರುಗಾಂವನಲ್ಲಿ ಮಾರುತಿ ವ್ಯಾಗನರ್ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟ್ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ನೂತನ ವ್ಯಾಗನರ್ ಕಾರನ್ನೇ ಹೋಲುತ್ತಿರುವ ಎಲೆಕ್ಟ್ರಿಕ್ ವ್ಯಾಗನರ್ ಇದೀಗ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. 14 ಇಂಚಿನ ಅಲೋಯ್ ವ್ಹೀಲ್ ಹಾಗೂ LED ಟೈಲ್ ಲೈಟ್ಸ್ ಹೊಂದಿರುವ ನೂತನ ವ್ಯಾಗನರ್ ಇವಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಮಾರಾಟ ಕುಸಿತದಲ್ಲೂ ಮಾರುತಿ ಕೈ ಹಿಡಿದ ವ್ಯಾನಗ್ಆರ್ ಕಾರು!

ಎಲೆಕ್ಟ್ರಿಕ್ ವ್ಯಾಗನರ್ ಕಾರು 7 ಸೀಟ್ ಕಾರಾಗಿರುವ ಸಾಧ್ಯತೆ ಹೆಚ್ಚಿದೆ. ಜಪಾನ್ ಸೇರಿದಂತೆ ಇತರ ರಾಷ್ಟ್ರದಲ್ಲಿರುವ ಸುಜುಕಿ ಸೊಲಿಯೋ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಇದೇ ಕಾರನ್ನು ನೂತನ ಎಲೆಕ್ಟ್ರಿಕ್ ವ್ಯಾಗನರ್ ಕಾರಾಗಿ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್, ಹ್ಯುಂಡೈ ಕೋನಾ, ಎಂಜಿ Z ಪ್ಲಸ್, ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಇದೀಗ ಮಹೀಂದ್ರ KUV100 ಹಾಗೂ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ನಡುವೆ ಮಾರುತಿ ವ್ಯಾಗನರ್ ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆಯಾಗಲಿದೆ.

click me!