ಮೊದಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಅನಾವರಣ; ಕೇವಲ 30 ಕಾರು ಮಾತ್ರ ಲಭ್ಯ!

By Suvarna News  |  First Published Aug 22, 2020, 5:38 PM IST

ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ರೋಲ್ಸ್ ರೋಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. 1961 ಫ್ಯಾಂಟಮ್ ವಿ ಕಾರು ಅನಾವರಣ ಮಾಡಲಾಗಿದೆ. ಆದರೆ ಕೇವಲ 30 ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ.


ಲಂಡನ್(ಆ.22): ರೋಲ್ಸ್ ರಾಯ್ಸ್ ಕಾರುಗಳೆಂದರೆ ಎಲ್ಲರಿಗೂ ಬಲು ಪ್ರೀತಿ. ಆದರೆ ಖರೀದಿ ಕೆಲವರಿ ಮಾತ್ರ ಸಾಧ್ಯ. ಇದೀಗ ರೋಲ್ಸ್ ರಾಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ನೂತನ '1961 ಫ್ಯಾಂಟಮ್ ವಿ' ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆ ಹೊಂದಿದೆ. 1961ರ ಫ್ಯಾಂಟಮ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲಾಗಿದೆ. ಆದರೆ ರೆಟ್ರೋ ಶೈಲಿಯನ್ನೇ ಉಳಿಸಲಾಗಿದೆ.

ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!

Latest Videos

undefined

ಜನಪ್ರಿಯ 1961 ರೋಲ್ಸ್ ರಾಯ್ಸ್ ಫ್ಯಾಂಟಮ್ ಶೈಲಿಯಲ್ಲೇ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಆದರೆ ಕೇವಲ 30 ಕಾರುಗಳನ್ನು ಮಾತ್ರ ನಿರ್ಮಾಣ ಮಾಡಲು ರೋಲ್ಸ್ ರಾಯ್ಸ್ ನಿರ್ಧರಿಸಿದೆ. ಹೀಗಾಗಿ ಮೊದಲು ಬುಕ್ ಮಾಡಿದವರೆಗೆ ಮಾತ್ರ ಕಾರು ಸಿಗಲಿದೆ. 

ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!

ರೋಲ್ಸ್ ರಾಯ್ಸ್ ನೂತನ ಎಲೆಕ್ಟ್ರಿಕ್ ಕಾರು ವಿಶ್ವದ ಎಲ್ಲಾ ಭಾಗದಲ್ಲೂ ಲಭ್ಯವಿದೆ. ಆದರೆ ಕೇವಲ 30 ಕಾರಾಗಿರುವ ಕಾರಣ ಹಲವು ಭಾಗಗಳಲ್ಲಿ ಕಾಣಸಿಗುವುದೇ ಕಷ್ಟ.  120 Khw ಬ್ಯಾಟರಿ ಬಳಸಲಾಗಿದೆ.  ನೂತನ 1961 ಫ್ಯಾಂಟಮ್ ವಿ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 480 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.  

ನೂತನ ರೋಲ್ಸ್ ರಾಯ್ಸ್ 1961 ಫ್ಯಾಂಟಮ್ ವಿ ಎಲೆಕ್ಟ್ರಿಕ್ ಕಾರಿನ ಬೆಲೆ 4.90 ಕೋಟಿ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಈ ಕಾರಿನೊಂದಿಗೆ ರೋಲ್ಸ್ ರಾಯ್ಸ್ ಮತ್ತೊಂದು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.  ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಂಡ್ ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆಯಾಗಲಿದೆ.

click me!