ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಯಮಹಾ WR 155R ಆಫ್ ರೋಡ್ ಬೈಕ್!

Suvarna News   | Asianet News
Published : Apr 19, 2020, 03:36 PM IST
ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಯಮಹಾ WR 155R ಆಫ್ ರೋಡ್ ಬೈಕ್!

ಸಾರಾಂಶ

ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಅಂಡ್ವೆಂಚರ್ ಬೈಕ್ ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿದೆ. ಜನರು ಆಫ್ ರೋಡ್ ಬೈಕ್ ಹೆಚ್ಚು ಇಷ್ಟಪಡುತ್ತಿದ್ದಾರೆ. ಗುಂಡಿ ಹಳ್ಳ ಬಿದ್ದ ರಸ್ತೆಗಳಲ್ಲಿ ಆಫ್ ರೋಡ್‌ಬೈಕ್‌ಗಳೇ ಸೂಕ್ತ. ಇದೀಗ ಭಾರತದಲ್ಲಿ ಯಮಹಾ WR 155R ಆಫ್ ರೋಡ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್ ವಿವರ ಇಲ್ಲಿದೆ.

ನವದೆಹಲಿ(ಏ.19): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಹಲವು ವಾಹನಗಳ ಬಿಡುಗಡೆ ಸ್ಥಗಿತಗೊಂಡಿದೆ. ಇದೀಗ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕೊರೋನಾ ಹತೋಟಿಗೆ ಬಂದು ಲಾಕ್‌ಡೌನ್ ತೆರವುಗೊಳಿಸುವುದನ್ನೇ ಎದರುನೋಡುತ್ತಿದೆ. ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಹಲವು ವಾಹನಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದೇ ಸಾಲಿನಲ್ಲಿ ಯಮಹಾ ಕೂಡ ಇದೆ. 

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!...

ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ  ಯಮಹಾ WR 155R ಆಫ್ ರೋಡ್ ಬೈಕ್ ಲಾಕ್‌ಡೌನ್ ಬಳಿಕ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಆಫ್ ರೋಡ್ ಬೈಕ್ ಬೆಲೆ 1.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಯಮಹಾ ಅಂಡ್ವೆಂಚರ್ ಬೈಕ್‌ನಲ್ಲಿ ಯಮಹಾ R15 ಎಂಜಿನ್‌ ಬಳಸಲಾಗಿದೆ. ಈಗಾಗಲೇ ಇಂಡೋನೇಷಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಯಮಹಾ WR 155R ಬಿಡುಗಡೆಯಾಗಿದೆ.

​​​​​​​

ಲಾಕ್‌ಡೌನ್ ಆಫರ್; ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಉಚಿತ!.

ಯಮಹಾ WR 155R ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. 16.7 PS ಪವರ್ 14.3 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಹೀರೋ Xpulse 200, ರಾಯಲ್ ಎನ್‌ಫೀಲ್ಡ್ ಹಿಮಾಲಯನ್, KTM 390 ಅಂಡ್ವೆಂಚರ್, BMW G 310 GS ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಲಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ