ಲಾಕ್‌ಡೌನ್ ಕಾರಣ ಜನರು ಹೊರಗೆ ಬರುತ್ತಿಲ್ಲ. ಬಹುತೇಕ ಎಲ್ಲರೂ ನಿಯಮ ಪಾಲಿಸುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಆಯಾ ಜಿಲ್ಲೆಯಲ್ಲಿ ಕೊರೋನಾ ಸೋಂಕು ತೊಲಗಿಸಲು ಸೂಚಿಸಿದೆ. ಆದರೆ ಈ ಲಾಕ್‌ಡೌನ್ ವೇಳೆ ಖಾಲಿ ರಸ್ತೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಸರ್ಕಾರದ ವಾಹನವನ್ನು ಡ್ರೈವಿಂಗ್ ಕಲಿಯಲು ಬಳಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ. ಈ ಕುರಿತ ಹಚ್ಚಿನ ಮಾಹಿತಿ ಇಲ್ಲಿದೆ.
ರಾಯ್‌ಪುರ್(ಏ.19): ಜನರಿಗೆ ಸಮಸ್ಯೆಯಾಗಬಾರದು, ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಮುಂಜಾಗ್ರತೆ, ನಿರ್ಗತಿಕರು, ಬಡವರಿಗೆ ಆಹಾರ-ನೀರು ಸೇರಿದಂತೆ ಆಯಾ ಜಿಲ್ಲೆಯ ಸಂಪೂರ್ಣ ಜವಾಬ್ದಾರಿಗಳನ್ನು ಜಿಲ್ಲಾಡಳಿತ ನೋಡಿಕೊಳ್ಳಲಿದೆ. ಲಾಕ್‌ಡೌನ್ ವೇಳೆ ಹೆಚ್ಚಿನ ಕೆಲಸ ಮಾಡಬೇಕಿದ್ದ ಮಧ್ಯಪ್ರದೇಶದ ರಾಯ್‌ಪುರ್ ಉಪವಿಭಾಗಿಯ ಮ್ಯಾಜಿಸ್ಟ್ರೇಟ್ ಎಂಜಾಯ್ ಮಾಡಲು ಹೊರಟಿದ್ದಾರೆ. ಆದರೆ ಇದೀಗ ಸಂಕಷ್ಟ ತಂದಿದೆ.
U ಟರ್ನ್ ಬದಲು ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ, ಇಳಿದಾಗ ಸಾಹಸಿಗೆ ಕಾದಿತ್ತು ಅಚ್ಚರಿ!
ಲಾಕ್‌ಡೌನ್ ಕಾರಣ ಸರ್ಕಾರ ಅಧಿಕಾರಿಗಳ ವಾಹನಕ್ಕೆ ಫುಲ್‌ಟ್ಯಾಂಕ್ ಇಂಧನ ತುಂಬಿಸಿದೆ. ಜಿಲ್ಲೆಯನ್ನು ಕೊರೋನಾದಿಂದ ಮಕ್ತವಾಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಆದರೆ ರಾಯ್‌ಪುರ್ ಉಪವಿಭಾಗಿಯ ಮ್ಯಾಜಿಸ್ಟ್ರೇಟ್ ಕಿರಣ್ ಜೈನ್ ತಮಗೆ ಸರ್ಕಾರ ನೀಡಿರುವ ವಾಹನದಲ್ಲಿ ಪತ್ನಿ ಡ್ರೈವಿಂಗ್ ಕಲಿಯುತ್ತಿದ್ದಾರೆ. ಲಾಕ್‌ಡೌನ್ ಕಾರಣ ರಸ್ತೆಗಳೆಲ್ಲಾ ಕಾಲಿ ಕಾಲಿಯಾಗಿದೆ. ಮ್ಯಾಜಿಸ್ಟ್ರೇಟ್ ಪತ್ನಿ ಇದೇ ಸರಿಯಾದ ಸಮಯ ಎಂದು ರಸ್ತೆಯಲ್ಲಿ ಸರ್ಕಾರಿ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದಾರೆ.
ಪ್ರತಿ ದಿನ ಸರ್ಕಾರ ನೀಡಿರುವ ಮಹೀಂದ್ರ ಬೊಲೆರೋ ಜೀಪಿನಲ್ಲಿ ಮ್ಯಾಜಿಸ್ಟ್ರೇಟ್ ಪತ್ನಿ ಡ್ರೈವಿಂಗ್ ಕಲಿಯುತ್ತಿರುವುದನ್ನು ಸ್ಥಳಿಯರು ಗಮನಿಸಿದ್ದಾರೆ. ಹೀಗಾಗಿ ಸ್ಥಳೀಯ ಮಾಧ್ಯಮ ಕ್ಯಾಮರ ಮೂಲಕ ಡ್ರೈವಿಂಗ್ ಕ್ಲಾಸನ್ನು ಸೆರೆ ಹಿಡಿದಿದ್ದಾರೆ. ಉಪವಿಭಾಗಿಯ ಮ್ಯಾಜಿಸ್ಟ್ರೇಟ್ ಚಾಲಕನನ್ನೂ ಕೂರಿಸಿ ಮ್ಯಾಜಿಸ್ಟ್ರೇಟ್ ಪತ್ನಿ ಡ್ರೈವಿಂಗ್ ಕಲಿಯುತ್ತಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮ್ಯಾಜಿಸ್ಟ್ರೇಟ್ ಪತ್ನಿಯನ್ನು ಕೇಳಿದರೆ ಮಾಧ್ಯಮದ ಜೊತೆ ನಾನು ಮಾತನಾಡುವುದಿಲ್ಲ ಎಂದು ಜಾರಿಕೊಂಡಿದ್ದಾರೆ.
ಬೆಂಝ್ ಕಾರಿನಲ್ಲಿ ಸ್ವರ್ಗ ಪ್ರಯಾಣ, ನಿಧನದಲ್ಲೂ ಪ್ರಚಾರ ಪಡೆದ ರಾಜಕಾರಣಿ!...
ಈ ಕುರಿತು ರಾಯ್‌ಪುರ್ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಗಮನಕ್ಕೆ ಬಂದು ಡ್ರೈವಿಂಗ್ ಕಲಿಯುತ್ತಿದ್ದಾರಾ? ಅಥವಾ ಮ್ಯಾಜಿಸ್ಟ್ರೇಟ್‌ಗೆ ತಿಳಿಯದಂತೆ ವಾಹನ ಬಳಕೆ ಮಾಡಿದ್ದಾರಾ ಅನ್ನೋದು ಸ್ಪಷ್ಟವಾಗಿಲ್ಲ. ಸದ್ಯ ದೇಶವೇ ಕೊರೋನಾ ಮಹಾಮಾರಿಯನ್ನು ತೊಲಗಿಸಲು ಟೊಂಕ ಕಟ್ಟಿ ನಿಂತಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ವಾಹನಗಳು, ಸೇವೆಗಳು, ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಗಂಭೀರ ಅಫರಾದ ಎಂದು ಪರಿಗಣಿಸಲಾಗುತ್ತದೆ. ತನಿಖೆ ಬಳಿಕ ವರದ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ರಾಯ್‌ಪುರ್ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.