
ಬೆಂಗಳೂರು(ಅ.31): ಯಮಹಾ ಮೋಟಾರ್ ಕಂಪೆನಿ ಇದೀಗ ಮತ್ತೊಂದು ಸ್ಪೋರ್ಟ್ಸ್ ಬೈಕ್ ಬಿಡುಗಡೆಗೆ ಸಿದ್ಧವಾಗಿದೆ. 150 ಸಿಸಿ ಸೆಗ್ಮೆಂಟ್ ಬೈಕ್ ಇದೀಗ ಇತರ ಎಲ್ಲಾ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ನೂತನ ಯಮಹಾ MT15 ಬೈಕ್ ಎಂಜಿನ್ ಯಮಹಾ R15 ಎಂಜಿನ್‌ನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ನೂತನ ಯಮಹಾ MT15 ವಿನ್ಯಾಸ ಎಂತವರನ್ನೂ ಆಕರ್ಷಿಸುತ್ತೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ MT15 ಬೈಕ್ ಹೆಚ್ಚು ಶಕ್ತಿಶಾಲಿಯಾಗಿದೆ.
19.3 ಹೆಚ್‌ಪಿ ಪವರ್ ಹಾಗೂ 15nm ಪೀಕ್ ಟಾರ್ಕ್ ಉತ್ಪಾದಿಸುತ್ತೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ನೂತನ MT15 ಬೈಕ್, ಎಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿದೆ. ನೂತನ ಯಮಹಾ MT15 ಬೈಕ್ ಬೆಲೆ 1.27 ಲಕ್ಷ(ಎಕ್ಸ್ ಶೋ ರೂಂ) ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. 2019ರ ಆರಂಭದಲ್ಲೇ ನೂತನ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.