ಶೀಘ್ರದಲ್ಲೇ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಬಿಡುಗಡೆ!

By Web DeskFirst Published Oct 31, 2018, 5:21 PM IST
Highlights

ಮಾರುತಿ ಸುಜುಕಿ ಸಂಸ್ಥೆಯ ಬಲೆನೋ ಕಾರು ಭಾರತೀಯರ ಮನ ಗೆದ್ದಿದೆ. ಇದೀಗ ಬಲೆನೋ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಬಲೆನೋ ಫೇಸ್‌ಲಿಫ್ಟ್ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಂಗಳೂರು(ಅ.31): ಮಾರುತಿ ಸುಜುಕಿ ಸಂಸ್ಥೆಯ ಬಲೆನೋ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ. 2015ರಲ್ಲಿ ಮೊದಲ ಬಾರಿಗೆ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿ ರಸ್ತೆಗಿಳಿದಿತ್ತು. ಇದೀಗ ನೂತನ ಬಲೆನೋ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜಾಗುತ್ತಿದೆ.

ನೂತನ ಬಲೆನೋ ಕಾರಿನ ಫ್ರಂಟ್ ಹಾಗೂ ರೇರ್ ಬಂಪರ್, ಹೆಡ್‌ಲ್ಯಾಂಪ್, ಆಲೋಯ್ ವೀಲ್ಹ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ. ಎಬಿಎಸ್, ಇಬಿಡಿ ಹಾಗೂ ಡ್ಯುಯೆಲ್ ಏರ್‌ಬ್ಯಾಗ್ ಯಾವುದೇ ವೆರಿಯೆಂಟ್ ಬಲೆನೋ ಕಾರಿನಲ್ಲಿ ಲಭ್ಯವಿದೆ.

ನೂತನ ಬಲೆನೋ ಕಾರಿನ ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೈಂಡರ್ ಹೊಂದಿದೆ ಇನ್ನು ಆಲ್ಫಾ ವೇರಿಯೆಂಟ್ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಅಳವಡಿಸಲಾಗಿದೆ.

ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಇಂಜಿನ್ ಹೊಂದಿದೆ. ನೂತನ ಫೇಸ್‌ಲಿಫ್ಟ್ ಕಾರಿನ ಬೆಲೆ 5.38 ಲಕ್ಷ (ಎಕ್ಸ್ ಶೋ ರೂಂ) ಯಿಂದ  8.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ವರೆಗಿದೆ.

2019ರ ಜೂನ್‌ನಲ್ಲಿ ಬಲೆನೋ ಫೇಸ್‌ಲಿಫ್ಟ್ ಬಿಡಗಡೆಯಾಗಲಿದೆ. ಆದರೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕಾರಿನ ಬುಕ್ಕಿಂಗ್ ಆರಂಭಗೊಳ್ಳಲಿದೆ. ನೂತನ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಹ್ಯುಂಡೈ ಹಾಗೂ ಟಾಟಾ ಸಂಸ್ಥೆಯ ಹ್ಯಾಚ್‌ಬ್ಯಾಕ್ ಕಾರುಗಳಿಗೆ  ಸೆಡ್ಡು ಹೊಡೆಯುವ ವಿಶ್ವಾಸದಲ್ಲಿದೆ.

click me!