5 ಸಾವಿರಕ್ಕೆ ಬುಕ್ ಮಾಡಿ ಯಮಹಾ MT-15 ಬೈಕ್!

By Web Desk  |  First Published Mar 12, 2019, 3:53 PM IST

ಯಮಹಾ  MT-15 ಬೈಕ್ ಬಿಡುಗಡೆಯಾಗುತ್ತಿದೆ. ನೂತನ ಬೈಕ್ ಅಧಿಕೃತ ಬುಕಿಂಗ್ ಆರಂಭಗೊಂಡಿದೆ. ಈ ಬೈಕ್ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಮಾ.12): ಭಾರದದ ಬೈಕ್ ಮಾರುಕಟ್ಟೆಯಲ್ಲಿ ಯಮಹಾ ಬೈಕ್‌ಗಳಿಗೆ ಭಾರಿ ಬೇಡಿಕೆ ಇದೆ. ಯಮಹಾ RX100 ಬೈಕ್‌ನಿಂದ ಹಿಡಿದು ಬಿಡುಗಡೆಯಾಗುತ್ತಿರುವ ನೂತನ ಬೈಕ್‌ಗಳ ವರೆಗೆ ಯಮಹಾ ಗ್ರಾಹಕರ ನೆಚ್ಚಿನ ಬೈಕ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಯಮಹಾ MT-15 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಬುಕಿಂಗ್ ಕೂಡ ಆರಂಭಗೊಂಡಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಸ್ಕೂಟರ್ ಬಿಡುಗಡೆ!

Tap to resize

Latest Videos

undefined

ಮಾರ್ಚ್ 15 ರಂದು ಯಮಹಾ MT-15 ಬೈಕ್ ಬಿಡುಗಡೆಯಾಗಲಿದೆ. ಇದೀಗ ಅಧಿಕೃತ ಬುಕಿಂಗ್ ಆರಂಭಗೊಂಡಿದೆ. 5,000 ರೂಪಾಯಿ ನೀಡಿ ಬುಕ್ ಮಾಡಬಹುದು. ಆಕರ್ಷಕ ಶೈಲಿ ಈ ಬೈಕ್‌ನ ಅಂದ ಹೆಚ್ಚಿಸಿದೆ. ಕಪ್ಪು ಹಾಗೂ ನೀಲಿ ಮಿಶ್ರಿತ ಯಮಹಾ MT-15 ಮತ್ತೊಮ್ಮೆ ಯುವಕರನ್ನು ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

ಯಮಹಾ MT-15 ಬೈಕ್ 155cc, SOHC, lಲಿಕ್ವಿಡ್ ಕೂಲ್‌ಡ್ , 4-ವೇಲ್ವ್, FI ಎಂಜಿನ್ ಹೊಂದಿದೆ. 19.1 bhp ಪವರ್ ಹಾಗೂ 14.7 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಡ್ಯುಯೆಲ್ ಚಾನೆಲ್ ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.
 

click me!