ಬಿಡುಗಡೆಯಾಗಲಿದೆ MG ಮೋಟಾರ್ಸ್ ಎಲೆಕ್ಟ್ರಿಕ್ SUV ಕಾರು

By Web DeskFirst Published Mar 11, 2019, 9:41 PM IST
Highlights

MG ಮೋಟಾರ್ಸ್ ಕಂಪನಿ ನೂತನ SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ, ಸುಲಭ ಚಾರ್ಜಿಂಗ್ ಸೌಲಭ್ಯವುಳ್ಳ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಮಾ.11): MG ಮೋಟಾರ್ಸ್ ಕಂಪನಿ ಭಾರತದಲ್ಲಿ ತನ್ನ ಮೊತ್ತ ಮೊದಲ SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಪ್ರಯಾಣದ ರೇಂಜ್ ಹೊಂದಿರುವ ಈ ಕಾರು ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ಭಾರತದ ಆಯ್ದ ನಗರಗಳಲ್ಲಿ ಮಾತ್ರ  MG ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. OTA(over-the-air) ಟೆಕ್ನಾಲಜಿ ಕಾರು ಇದಾಗಿದ್ದು, ಸಲುಭ ಚಾರ್ಜಿಂಗ್ ಹಾಗೂ ಗರಿಷ್ಠ ರೇಂಜ್ ನೀಡಲಿದೆ.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!

ನೂತನ ಎಲೆಕ್ಟ್ರಿಕ್ ಕಾರಿನ ಬೆಲೆ 10 ರಿಂದ 14 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಡಿಮೆ ಬೆಲೆ SUV ಎಲೆಕ್ಟ್ರಿಕ್ ಕಾರು. 2020ರಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. ಇದು 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

click me!