ಸ್ಮಾರ್ಟ್‌ಫೋನ್ ಯಶಸ್ಸಿನ ಬೆನ್ನಲ್ಲೇ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಿಓಮಿ(Xiaomi) ಚೀನಾ, ಭಾರತ ಸೇರಿದಂತೆ ಏಷ್ಯಾದಲ್ಲೇ ಜನಪ್ರಿಯವಾಗಿದೆ. ಇದೀಗ Xiaomi ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಮೊಬೈಲ್ ರೀತಿಯಲ್ಲೇ ಕಡಿಮೆ ಬೆಲೆಯ ಹಾಗೂ ಗರಿಷ್ಠ ಫೀಚರ್ಸ್ ಇರುವ ಸ್ಕೂಟರ್ ಇದಾಗಿದೆ. ನೂತನ ಸ್ಕೂಟರ್ ಕುರಿತ ಮಾಹಿತಿ ಇಲ್ಲಿದೆ.
ಬೀಜಿಂಗ್(ಜು.25): ಸ್ಮಾರ್ಟ್‌ಫೋನ್ ದಿಗ್ಗಜನಾಗಿ ಗುರುತಿಸಿಕೊಂಡಿರುವ Xiaomi ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೆ ಕಾಲಿಟ್ಟಿದೆ. Ninebot C30 ಎಂಬ ಎಲೆಕ್ಟ್ರಿಕ್ ಮೊಪೆಡ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ 3,599 ಚೀನಾ ಯುವಾನ್(ಭಾರತೀಯ ರೂಪಾಯಿಗಳಲ್ಲಿ 38,000).
ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ ಚಲ್ ಮೇರಿ ಲೂನಾ!
undefined
Xiaomi Ninebot C30 ಸ್ಕೂಟರ್ 400 w ಮೋಟಾರ್ ಹೊಂದಿದ್ದು, 40 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಸ್ಕೂಟರ್ ಗರಿಷ್ಠ ವೇಗ 25 kmph. ಸಂಪೂರ್ಣ ಚಾರ್ಜ್‌ಗೆ 35 ಕಿ.ಮೀ ಮೈಲೇಜ್ ನೀಡಲಿದೆ. ಇದರ ಬ್ಯಾಟರಿ ಹೊರತೆಗೆದು ಮನೆಗೆ ತಂದು ಚಾರ್ಜ್ ಮಾಡಬಹುದು.
ನೂತನ ಶಿಓಮಿ Ninebot C30 ಮೊಪೆಡ್ ಸ್ಕೂಟರ್ ಚೀನಾದಲ್ಲಿ ಬಿಡುಗಡೆಯಾಗಿದೆ. ಶಿಓಮಿ ಮೊಬೈಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗರಿಷ್ಠ ಗ್ರಾಹಕರಿರುವ ಭಾತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಸದ್ಯ ಭಾರತ-ಚೀನಾ ಗಡಿ ಸಂಘರ್ಷದಿಂದ ಚೀನಾ ವಸ್ತುಗಳ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಸದ್ಯ ಭಾರತದಲ್ಲಿ ಸ್ಕೂಟರ್ ಬಿಡುಗಡೆ ಮಾಡಿಲ್ಲ. ಆದಗೆ ಗಡಿ ವಿವಾದ ತಣ್ಣಗಾದ ಬೆನ್ನಲ್ಲೇ ಭಾರತದಲ್ಲಿ ನೂತನ ಸ್ಕೂಟರ್ ಬಿಡುಗಡೆಯಾಗಲಿದೆ.