ಹೊಸ ಬೈಕ್ ಪಡೆದ ಸವಾರನ ಸಂಭ್ರಮಕ್ಕೆ ಶೋ ರೂಂ ಮೆಟ್ಟಿನ ಮಾರ್ಬಲ್ ಕಿತ್ತು ಬಂದ ಘಟನೆ ನಡೆದಿದೆ. ಬೈಕ್ ಏರಿ ಶೋ ರೂಂ ಮೆಟ್ಟಿಲು ಇಳಿದ ಸವಾರ ಸಾಹಸ ಪ್ರದರ್ಶಿಸಿದ್ದಾನೆ. ಆದರೆ ಸವಾರನ ಸಾಹಸಕ್ಕೆ ಶೋ ರೂಂ ಮಾಲೀಕನ ಜೇಬಿಗೆ ಕತ್ತರಿ ಬಿದ್ದಿದೆ.
ಬೆಂಗಳೂರು(ಜು.23): ಹೊಸ ವಾಹನ ಪಡೆದ ಖುಷಿ ಹೇಳತೀರದು. ಬೈಕ್, ಕಾರು ಅಥವಾ ಯಾವುದೇ ವಾಹನವಾಗಿರಲಿ ಕೈಗೆ ಸಿಕ್ಕ ಸಂಭ್ರಮದಲ್ಲಿ ಎಡವಟ್ಟುಗಳು ಆಗುತ್ತವೆ. ಹೊಸ ಖರೀದಿಸಿದ ಸಂಭ್ರಮದಲ್ಲಿ ಮಾಡಿದ ಎಡವಟ್ಟುಗಳ ಹಲವು ಬಾರಿ ಸುದ್ದಿಯಾಗಿವೆ. ಇಲ್ಲೋರ್ವ ಇದೇ ರೀತಿ ಹೊಸ ಬೈಕ್ ಖರೀದಿಸಿ ಸಂಭ್ರಮದಲ್ಲಿ ಎಡವಟ್ಟು ಮಾಡಿದ್ದಾರೆ. ಸವಾರನ ಎಡವಟ್ಟಿಗೆ ಶೋ ರೂಂ ಮೆಟ್ಟಿಲಿನ ಮಾರ್ಬಲ್ ಕಿತ್ತು ಬಂದಿದೆ.
ಹೊಸ ಕಾರಿನ ಕೀ ಪಡೆದ ಮರುಕ್ಷಣದಲ್ಲೇ ಶೋ ರೂಂ ಗೋಡೆಗೆ ಡಿಕ್ಕಿ, ಮಾಲೀಕನ ಕನಸು ಪುಡಿ ಪುಡಿ!
undefined
ಸವಾರ ಹೊಂಡಾ ಆಫ್ರಿಕ ಟ್ವಿನ್ ಬೈಕ್ ಖರೀದಿಸಿದ್ದಾನೆ. ಇದು ಆಫ್ ರೋಡ್‌ಗೂ ಸೂಕ್ತವಾಗಿರುವ ಬೈಕ್ ಕಾರಣ 250mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ನೂತನ ಬೈಕ್ ಪಡೆಯಲು ಶೋ ರೂಂ ತೆರಳಿದ್ದಾನೆ. ಬೈಕ್ ಪಡೆದ ಖುಷಿಯಲ್ಲಿ ಈ ಸವಾರ ಬೈಕ್ ಏರಿ ಕೆಳಗೆ ಇಳಿಯುತ್ತಿಲ್ಲ. ಶೋ ರೂಂ ಒಳಗಿನಿಂದ ಬೈಕ್‌ನಲ್ಲೇ ಮೆಟ್ಟಿಲು ಮೂಲಕ ರಸ್ತೆಗೆ ಹೋಗುವುದಾಗಿ ಹೇಳಿದ್ದಾನೆ.
ಸವಾರ ಆಫ್ ರೋಡ್‌ಗಳಲ್ಲಿ ಬೈಕ್ ರೈಡ್ ಮಾಡಿದ ಅನುಭವ ಹೊಂದಿದ್ದಾನೆ. ಹೀಗಾಗಿ ಈತನ ಮನವಿಗೆ ಶೋ ರೂಂ ಸಿಬ್ಬಂದಿಗಳು ಸಮ್ಮತಿಸಿದ್ದಾರೆ. ಕೀ ಪಡೆದ ಸವಾರ ಬೈಕ್ ಸ್ಟಾರ್ಟ್ ಮಾಡಿ ಶೋ ರೂಂ ಮೆಟ್ಟಿಲುಗಳಲ್ಲಿ ರೈಡ್ ಮಾಡಿಕೊಂಡು ಬೈಕ್ ಕಳೆಗಳಿಸಿದ್ದಾನೆ. ಬೈಕ್ ಪಡೆದ ಬಳಿಕ ಸಸ್ಪೆನ್ಶನ್ ಹೊಂದಿಸಿಕೊಳ್ಳಬೇಕಿತ್ತು. ಸಸ್ಪೆನ್ಶನ್ ಹೊಂದಿಸಿಕೊಂಡರೆ ಮೆಟ್ಟಿಲುಗಳ ಮೇಲೆಯೂ ಹೊಂಡಾ ಟ್ವಿನ್ ಆಫ್ರಿಕಾ ಬೈಕ್ ಸವಾರಿ ಮಾಡಲಿದೆ. ಆದರೆ ನೂತನ ಬೈಕ್‌ನಲ್ಲಿ ಸಸ್ಪೆನ್ಶನ್ ಅಡ್ಜಸ್ಟ್ ಮಾಡಿಲ್ಲ.
ಬೈಕ್ ಸವಾರ ಮೆಟ್ಟಿಲು ಇಳಿಯುತ್ತಿದ್ದಂತೆ ಬೈಕ್‌ನ ಎಂಜಿನ್ ಬ್ಯಾಶ್ ಪ್ಲೇಟ್ ಮೆಟ್ಟಿಲಿನ ಮಾರ್ಬಲ್‌ಗೆ ತಾಗಿದೆ. ಇದರಿಂದ ಮೆಟ್ಟಿನ ಮಾರ್ಬಲ್, ಸಿಮೆಂಟ್ ಕಿತ್ತು ಬಂದಿದೆ. ಆದರೆ ಸವಾರನಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆಫ್ ರೋಡ್ ಬ್ಯಾಲೆನ್ಸ್ ಇರುವ ಈ ಸವಾರ ನಿರಾಯಾಸವಾಗಿ ಮೆಟ್ಟಿಲುಗಳ ಮೇಲಿಂದ ಬೈಕ್ ರೈಡ್ ಮಾಡಿ ಕೆಳಗಿಳಿಸಿದ್ದಾನೆ. ಇನ್ನು ಬೈಕ್‌ಗೂ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಶೋ ರೂಂ ಮಾಲೀಕನಿಗೆ ಮಾತ್ರ ಮಾರ್ಬಲ್ ಸರಿ ಮಾಡಬೇಕಾದ ಸಂಕಷ್ಟ ಎದುರಾಗಿದೆ.
ಹೊಂಡಾ ಆಫ್ರಿಕಾ ಟ್ವಿನ್ ಬೈಕ್ ಮೋಸ್ಟ್ ಪವರ್‌ಪುಲ್ ಬೈಕ್ ಎಂದೇ ಹೆಸರುವಾಸಿ. ಕಾರಣ 1,084 cc ಎಂಜಿನ್ ಹೊಂದಿರುವ ಈ ಬೈಕ್ 101 ps ಪವರ್ ಹಾಗೂ 105 Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).