ಬುಕಿಂಗ್‌ನಲ್ಲಿ ದಾಖಲೆ ಬರೆದ ಟೊಯೋಟ ಹ್ಯಾರಿಯರ್ SUV!

By Suvarna NewsFirst Published Jul 23, 2020, 7:14 PM IST
Highlights

ಟೊಯೋಟಾ ಹ್ಯಾರಿಯರ್ SUV ಕಾರು ಹೊಸ ದಾಖಲೆ ಬರೆದಿದೆ. 2020ರ ಎಪ್ರಿಲ್ ತಿಂಗಳಲ್ಲಿ ಪರಿಚಯಿಸಲಾದ ಟೊಯೋಟಾ ಹ್ಯಾರಿಯರ್ SUV ಕಾರು ಕೆಲ ತಿಂಗಳಲ್ಲಿ ದಾಖಲೆ ಬರೆದಿದೆ. SUV ಕಾರುಗಳ ಪೈಕಿ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಾರಿನ ವಿವರ ಇಲ್ಲಿದೆ.
 

ಜಪಾನ್(ಜು.23): ಟೊಯೋಟ ಹ್ಯಾರಿಯರ್ SUV ಕಾರು ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಿದೆ. ಈ ಕಾರು ಮೊದಲು ಜಪಾನ್‌ನಲ್ಲಿ ಬಿಡುಗಡೆಯಾದರೆ, ಬಳಿಕ ಉತ್ತರ ಅಮೆರಿಕದಲ್ಲಿ ಬಿಡುಗಡೆಯಾಗಿದೆ. ನೂತನ ಕಾರು ಕೆಲ ತಿಂಗಳಲ್ಲೇ 45,000 ಬುಕಿಂಗ್ ಆಗಿವೆ. ಈ ಮೂಲಕ ಕೆಲವೇ ತಿಂಗಳಲ್ಲಿ ಗರಿಷ್ಠ SUV ಕಾರು ಬುಕಿಂಗ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟೊಯೋಟಾ ರೇವ್4 ಹೈಬ್ರಿಡ್ ಕಾರನ್ನು Aಕ್ರಾಸ್ ಕಾರಾಗಿ ಅನಾವರಣ ಮಾಡಿದ ಸುಜುಕಿ!.

ಬಿಡುಗಡೆಯಾದ ಆರಂಭಿಕ 5 ತಿಂಗಳಲ್ಲಿ 3,100 ಕಾರು ಬುಕಿಂಗ್ ನಿರೀಕ್ಷೆಯನ್ನು ಟೊಯೋಟ ಇಟ್ಟುಕೊಂಡಿತ್ತು. ಆದರೆ 45,000 ಕಾರು ಬುಕಿಂಗ್ ಆಗೋ ಮೂಲಕ ಟೊಯೋಟ ಕಾರು ಸಂಸ್ಥೆಗೆ ಉತ್ಸಾಹ ಹೆಚ್ಚಿಸಿದೆ. ಸದ್ಯ ಕೊರೋನಾ ವೈರಸ್ ಕಾರಣ ಉತ್ಪಾದನೆ ಕೊಂಚ ವಿಳಂಬವಾಗಿದೆ. ಹೀಗಾಗಿ ಬುಕಿಂಗ್ ಮಾಡಿದ ಗ್ರಾಹಕರು ಗರಿಷ್ಠ 5 ತಿಂಗಳು ಕಾಯಬೇಕು ಎಂದು ಕಂಪನಿ ಹೇಳಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!..

1997ರಲ್ಲಿ ಟೊಯೋಟ ಹ್ಯಾರಿಯರ್ ಕಾರು ಜಪಾನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಇದೀಗ 4ನೇ ಜನರೇಶನ್ ಹ್ಯಾರಿಯರ್ ಕಾರು ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲಿ ಒಟ್ಟು 6,80,000 ಟೊಯೋಟ ಹ್ಯಾರಿಯರ್ ಕಾರು ಮಾರಾಟವಾಗಿದೆ.

ಟೊಯೋಟ ಹ್ಯಾರಿಯರ್ ಆಕರ್ಷಕ ವಿನ್ಯಾಸ ಹೊಂದಿದೆ. 2 ವೇರಿಯೆಂಟ್ ಎಂಜಿನ್ ಆಯ್ಕೆಗಳು ಲಭ್ಯವಿದೆ. ಪೋರ್ಸ್ ಪೆಟ್ರೋಲ್ ಹಾಗೂ ಹೈಬ್ರಿಡ್. 2.0 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆ ಹಾಗೂ 2.5 ಲೀಟರ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡಿದೆ. 

ನೂತನ ಟೊಯೋಟ ಹ್ಯಾರಿಯರ್ SUV ಕಾರಿನ ಬೆಲೆ 21.25 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 35.83 ಲಕ್ಷ ರೂಪಾಯಿ. ಈ ಕಾರು ಭಾರತದಲ್ಲಿ ಲಭ್ಯವಿಲ್ಲ. 

click me!