Xiaomi ಸ್ಮಾರ್ಟ್ ಫೋನ್ ಕಂಪನಿ ಇದೀಗ FAW ಕಾರು ಕಂಪನಿ ಜೊತೆ ಕೈಜೋಡಿಸಿದೆ. ಈ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ. ಇನ್ನು ಕಾರು ಕೂಡ ಸ್ಮಾರ್ಟ್ ಫೋನ್ ರೀತಿಯಲ್ಲಿ ಅಗ್ಗವಾಗುತ್ತಾ? ಇಲ್ಲಿದೆ ವಿವರ.
ಚೀನಾ(ಏ.10): ಚೀನಾ ಮೂಲದ FAW ಗ್ರೂಪ್ ಕಂಪನಿ ಇತ್ತೀಚೆಗೆ ಬೆಸ್ಟ್ಯೂನ್ SUV ಕಾರು ಅನಾವರಣ ಮಾಡಿದೆ. ವಿಶೇಷ ಅಂದರೆ ಅತೀ ದೊಡ್ಡ ಸ್ಮಾರ್ಟ್ ಫೋನ್ ಕಂಪನಿ Xiaomi ಜೊತೆ ಸೇರಿದ FAW ಗ್ರೂಪ್ ನೂತನ ಕಾರನ್ನು ಅನಾವರಣ ಮಾಡಿದೆ. ಈ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಚೀನಾ ಕಂಪನಿ ಮುಂದಾಗಿದೆ.
ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!
undefined
FAW ಗ್ರೂಪ್ ಕಾರು ಕಂಪನಿಯ ಬೆಸ್ಟ್ಯೂನ್ T77 ಕಾರು ಅನಾವರಣ ಮಾಡಿದೆ. ಎಂಜಿನ್ ಹಾಗೂ ಕಾರಿನ ಮಾಡೆಲ್ FAW ಗ್ರೂಪ್ ನಿರ್ಮಿಸಿದ್ದರೆ,ಕಾರಿನೊಳಗಿನ ಅತ್ಯಾಧುನಿಕ ತಂತ್ರಜ್ಞಾನಗಳನ್ನು Xiaomi ಒದಗಿಸಿದೆ. ಕಾರಿನ ಮಿರರ್ ಬದಲು ಕ್ಯಾಮಾರ, ಟಚ್ ಸ್ಕ್ರೀನ್, ಕಾರ್ ಪ್ಲೇ, ಸಿಸ್ಟಮ್, ವಾಯ್ಸ್ ರೀಡಿಂಗ್, ಫಿಂಗರ್ ಟಚ್ ರೀಡಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದೆ.
ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!
ಬೆಸ್ಟ್ಯೂನ್ T77 ಕಾರು 4.5 ಮೀಟರ್ ಉದ್ದ ಹೊಂದಿದ್ದು, 5 ಸೀಟರ್ ಸಾಮರ್ಥ್ಯ ಹೊಂದಿದೆ. 1.2 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್, 143hp ಪವರ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಇನ್ನು 7 ಸ್ಪೀಡ್ ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.