ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!

Published : Apr 10, 2019, 04:06 PM ISTUpdated : Jun 13, 2019, 11:38 AM IST
ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!

ಸಾರಾಂಶ

ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ನೂತನ ಕಾರು ಬಿಡುಗಡೆ ಮಾಡುತ್ತಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.  

ನವದೆಹಲಿ(ಏ.10): ರೆನಾಲ್ಟ್ ಕಾರು ಕಂಪನಿಯ ಕ್ವಿಡ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ. ಕಡಿಮೆ ಬೆಲೆಯಲ್ಲಿ ಸಣ್ಣ ಕಾರು ನೀಡೋ ಮೂಲಕ ರೆನಾಲ್ಟ್ ಎಲ್ಲರ ಮನಗೆದ್ದಿದೆ. ಇದೀಗ ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಕಡಿಮೆ ಬೆಲೆ ಹಾಗೂ ಗರಿಷ್ಠ ಉಪಯೋಗಿಸಬಲ್ಲ MPV ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ  ಟೊಯೊಟಾ ಇನೋವಾ, ಮಾರುಟಿ ಎರ್ಟಿಗಾ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. 

ಇದನ್ನೂ ಓದಿ: ರೆನಾಲ್ಟ್ ಕ್ವಿಡ್ ಬೆಲೆ ಹೆಚ್ಚಳ- ಏಪ್ರಿಲ್‌ನಿಂದ ಹೊಸ ಬೆಲೆ ಅನ್ವಯ!

ನೂತನ ಕಾರಿಗೆ ಸದ್ಯ ರೆನಾಲ್ಡ್ ಟ್ರೈಬರ್ ಎಂದು ನಾಮಕರಣ ಮಾಡಲಾಗಿದೆ. ಈ ಕಾರಿನ ಬೆಲೆ ಕೇವಲ 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಭಾರತದಲ್ಲಿರುವ ಅತ್ಯಂತ ಕಡಿಮೆ ಬೆಲೆಯ MPV ಕಾರು.  ಜುಲೈನಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಅತ್ಯುತ್ತಮ ಗುಣಮಟ್ಟ, ಮೈಲೇಜ್ ಹಾಗೂ ಗರಿಷ್ಠ ಸುರಕ್ಷತೆ ನೀಡಲಿದೆ ಎಂದು ಕಂಪನಿ ಹೇಳಿದೆ.

 

 

 

PREV
click me!

Recommended Stories

1100 ಕಿ.ಮೀ ಮೈಲೇಜ್, ಭಾರತದ JSW ನಿಂದ ಜೆಟೂರ್ ಪ್ಲಗ್ ಇನ್ ಹೈಬ್ರಿಡ್ ಕಾರು ಡಿ.3ಕ್ಕೆ ಅನಾವರಣ
ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್