ರಾಯಲ್ ಎನ್‌ಫೀಲ್ಡ್ ತನ್ನೆಲ್ಲಾ ಬೈಕ್‌ಗಳಿಗೆ ABS ತಂತ್ರಜ್ಞಾನ ಅಳವಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ನಿಯಮ ಪಾಲಿಸಿದೆ. ABS ತಂತ್ರತ್ರಾನ ಹೊಂದಿಗೆ ಬೈಕ್ ಬೆಲೆ ಕೊಂಚ ಏರಿಕೆಯಾಗಿದೆ. ಇಲ್ಲಿದೆ ರಾಯಲ್ ಏನ್‌ಫೀಲ್ಡ್ ABS ಬೈಕ್ ಬೆಲೆ ವಿವರ.
ನವದೆಹಲಿ(ಏ.10): ನೂತನ ನಿಮಯದ ಪ್ರಕಾರ ಏಪ್ರಿಲ್ 1 ರಿಂದ 125CC ಗಿಂತ ಹೆಚ್ಚಿನ ಎಂಜಿನ್ ಹೊಂದಿರವು ಎಲ್ಲಾ ಬೈಕ್ ಹಾಗೂ ಸ್ಕೂಟರ್‌ಗಳು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಥವಾ CBS(ಕಾಂಬಿ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನ ಅಳಡಿಸಿಕೊಳ್ಳಲೇಬೇಕು. ಇದೀಗ ರಾಯಲ್ ಎನ್‌ಫೀಲ್ಡ್ ತನ್ನ ಎಲ್ಲಾ ಬೈಕ್‌ಗೆ ABS ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!
undefined
ರಾಯಲ್ ಎನ್‌ಫೀಲ್ಡ್ ಬುಲೆಟ್ 350, 350ES, 500, ಕ್ಲಾಸಿಕ್ 350, ಕ್ಲಾಸಿಕ್ 500 ಹಾಗೂ ಥಂಡರ್‌ಬರ್ಡ್ ಬೈಕ್‌ಗಳು ABS ತಂತ್ರಜ್ಞಾನ ಅಳವಡಿಸಿ ಬಿಡುಗಡೆಯಾಗಿದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350, 350ES ಸಿಂಗಲ್ ಚಾನೆಲ್ ABS ಹೊಂದಿದ್ದರೆ, ಉಳಿದ ಮಾಡೆಲ್ ಡ್ಯುಯೆಲ್ ಚಾನೆಲ್ ABS ಹೊಂದಿದೆ.
ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೇಜ್- ದಾಖಲೆ ಬರೆದ TVS ರೆಡಿಯಾನ್!
ರಾಯಲ್ ಎನ್‌ಫೀಲ್ಡ್ ABS ಬೈಕ್ ಬೆಲೆ (ಎಕ್ಸ್ ಶೋ ರೂಂ)
ಬುಲೆಟ್ 350 ABS = 1.21 ಲಕ್ಷ
ಬುಲೆಟ್ 350 ES ABS = 1.35 ಲಕ್ಷ
ಬುಲೆಟ್ 500 ABS = 1.88 ಲಕ್ಷ
ಕ್ಲಾಸಿಕ್ 350 ABS = Rs 1.53 ಲಕ್ಷ
ಕ್ಲಾಸಿಕ್ 500 ABS = Rs 2.04 ಲಕ್ಷ
ಕ್ಲಾಸಿಕ್ 500 ಕ್ರೊಮ್ ABS = Rs 2.12 ಲಕ್ಷ
ಥಂಡರ್‌ಬರ್ಡ್ 350 ABS = Rs 1.56 ಲಕ್ಷ
ಥಂಡರ್‌ಬರ್ಡ್ 350 X ABS = Rs 1.63 ಲಕ್ಷ
ಥಂಡರ್‌ಬರ್ಡ್ 500 ABS = Rs 2.06 ಲಕ್ಷ
ಥಂಡರ್‌ಬರ್ಡ್ 500 X ABS = Rs 2.14 ಲಕ್ಷ
ಹಿಮಾಲಯ ABS = Rs 1.80 ಲಕ್ಷ
ಥಂಡರ್‌ಬರ್ಡ್ ಸ್ಲೀಟ್ ABS = Rs 1.82 ಲಕ್ಷ