ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!

By Akshit Choudhary  |  First Published Dec 10, 2018, 6:08 PM IST

WWE ಸೂಪರ್ ಸ್ಟಾರ್, ಭಾರತದ ದಿ ಗ್ರೇಟ್ ಖಲಿ, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ರೈಡ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಖಲಿ ಬೈಕ್ ರೈಡ್ ಮಾಡಿದ್ದೇಕೆ? ಇಲ್ಲಿದೆ ವಿವರ.


ಪಂಜಾಬ್(ಡಿ.10): ವೃತ್ತಿಪರ ರಸ್ಲರ್ ದಿ ಗ್ರೇಟ್ ಖಲಿ ಸದ್ಯ ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೇರಿಕಾದ WWE ರಸ್ಲಿಂಗ್‌ನಲ್ಲಿ ಮಿಂಚಿದ ಖಲಿ, ನಿವೃತ್ತಿ ಬಳಿಕ ಭಾರತದಲ್ಲಿ ರಸ್ಲಿಂಗ್ ಅಕಾಡೆಮಿ ತೆರೆದು ತರಬೇತಿ ನೀಡುತ್ತಿದ್ದಾರೆ.

ಕಾಂಟಿನೆಂಟಲ್ ರಸ್ಲಿಂಗ್ ಸ್ಕೂಲ್ ನಡೆಸುತ್ತಿರುವ ಖಲಿ, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ರೈಡ್ ಮಾಡೋ ಮೂಲಕ ಗಮನಸೆಳೆದಿದ್ದಾರೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್  ಬೈಕ್ ಮೇಲೆ ಒಂದು ರೌಂಡ್ ಹೊಡೆದಿದ್ದಾರೆ.

Tap to resize

Latest Videos

undefined

 

ಬರೋಬ್ಬರಿ 7 ಅಡಿ ಎತ್ತರದ ಖಲಿ, ಗರಿಷ್ಠ ಎತ್ತರದ ರಸ್ಲರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಹೀಗಾಗಿ ಖಲಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ತೀರಾ ಸಣ್ಣದಾಗಿ ಕಾಣಿಸುತ್ತಿದೆ.  ಆದರೆ ಖಲಿ ಬೈಕ್ ರೈಡ್ ಎಂಜಾಯ್ ಮಾಡಿದ್ದಾರೆ. ಫ್ರೀ ಸಮಯದಲ್ಲಿ ಅಕಾಡೆಮಿಯಲ್ಲಿ ಬೈಕ್ ರೈಡ್ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

tags
click me!