ಬುಗಾಟಿ ಚಿರೋನ್- ಇದು ವಿಶ್ವದ ಅತ್ಯಂತ ದುಬಾರಿ ಕಾರು!

By Web Desk  |  First Published Mar 6, 2019, 5:01 PM IST

ಬುಗಾಟಿ 110ನೇ ವಾರ್ಷಿಕೋತ್ಸವಕ್ಕೆ ನೂತನ ಕಾರನ್ನು ಅನಾವರಣ ಮಾಡಿದೆ. ಜಿನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಈ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಜಿನೆವಾ(ಮಾ.06): ದುಬಾರಿ ಹಾಗೂ ಐಷಾರಾಮಿ ಕಾರು ಎಂದೇ ಗುರುತಿಸಿಕೊಂಡಿರುವ ಬುಗಾಟಿ ಇದೀಗ ಹೊಸ ಕಾರನ್ನ ಅನಾವರಣ ಮಾಡಿದೆ. ಜಿನೆವಾ ಮೋಟಾರ್ ಶೋನಲ್ಲಿ ಬುಗಾಟಿ ಚಿರೋನ್ ಕಾರನ್ನ ಪರಿಚಯಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.

Latest Videos

undefined

ಇದನ್ನೂ ಓದಿ:ಬುಲೆಟ್ ಪ್ರೂಫ್,ಬಾಂಬ್ ಪ್ರೊಟೆಕ್ಷನ್ - ರೇಂಜ್ ರೋವರ್ ಕಾರು ಬಿಡುಗಡೆಗೆ ರೆಡಿ!

ಬುಗಾಟಿ ಚಿರೋನ್ ಬ್ಲಾಕ್ ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಹೀಗಾಗಿ ಈ ಕಾರಿನ ಬೆಲೆ ಬರೋಬ್ಬರಿ 118 ಕೋಟಿ ರೂಪಾಯಿ(ಆನ್ ರೋಡ್ ಬೆಲೆ). ಸಂಪೂರ್ಣ ಕಾರು ಕಾರ್ಬನ್ ಫೈಬರ್ ನಿರ್ಮಿತವಾಗಿದೆ. 

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಸದ್ದಡಗಿಸಲು ಬರುತ್ತಿದೆ ಟಾಟಾ ಬ್ಲಾಕ್‌ಬರ್ಡ್!

8.9 ಲೀಟರ್ ಕ್ವಾಡ್ ಟರ್ಬೋ ಚಾರ್ಜ್ W16 ಎಂಜಿನ್ 1,500 ps ಪವರ್ ಹಾಗೂ 1,600nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಈ ಕಾರಿನ ಗರಿಷ್ಠ ಸ್ಪೀಡ್ 420 KMPH. 0 to 100 kmph ತೆಗೆದುಕೊಳ್ಳುವ ಸಮಯ 2.5 ಸೆಕೆಂಡ್ ಮಾತ್ರ.

click me!