ವೋಕ್ಸ್‌ವ್ಯಾಗನ್ ಇಂಡಿಯಾ ಸಂಸ್ಥೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ವೋಕ್ಸ್‌ವ್ಯಾಗನ್ ಸಂಸ್ಥೆಗೆ ಬರೋಬ್ಬರಿ 500 ಕೋಟಿ ದಂಡ ವಿದಿಸಲಾಗಿದೆ. ಅಷ್ಟಕ್ಕೂ ದಂಡ ವಿದಿಸಿದ್ದು ಯಾಕೆ? ಇಲ್ಲಿದೆ ಹೆಚ್ಚಿನ ವಿವರ.
ನವದೆಹಲಿ(ಮಾ.07): ಎಮಿಶನ್ ನಿಯಮ ಪಾಲಿಸಲು ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದ ವೋಕ್ಸ್‌ವ್ಯಾಗನ್ ಇಂಡಿಯಾ ಕಂಪೆನಿಗೆ ಇದೀಗ ಬರೋಬ್ಬರಿ 500 ಕೋಟಿ ರೂಪಾಯಿ ದಂಡ ವಿಧಿಸಲಾಗಿದ. 2 ತಿಂಗಳೊಳಗೆ ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ಮಂಡಳಿ(National Green Tribunal) ಸೂಚಿಸಿದೆ.
ಇದನ್ನೂ ಓದಿ: ಹೆಲ್ಮೆಟ್ ಹಾಕದ ವೋಕ್ಸ್‌ವ್ಯಾಗನ್ ಕಾರು ಚಾಲಕನಿಗೆ ದಂಡ!
undefined
ಡೀಸೆಲ್ ಕಾರು ಎಮಿಶನ್ ಟೆಸ್ಟ್ ವೇಳೆ ವೋಕ್ಸ್‌ವ್ಯಾಗನ್ ಕಂಪೆನಿ ಕಿಟ್ ಅಳವಡಿಸಿ ಎಮಿಶನ್ ನಿಯಮದಲ್ಲಿ ಯಾವುದೇ ಸಮಸ್ಯೆ ಬರದ ರೀತಿ ನೋಡಿಕೊಂಡಿತ್ತು. ಆದರೆ ವೋಕ್ಸ್‌ವ್ಯಾಗನ್ ವಂಚನೆ ಬಳಿಕ ಬಯಲಾಗಿತ್ತು. ಇದಕ್ಕೆ ಈ ಹಿಂದೆ 171 ಕೋಟಿ ರೂಪಾಯಿ ದಂಡ ವಿದಿಸಿತ್ತು.
ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!
ದಂಡ ಪಾವತಿಸಿದ ವೋಕ್ಸ್‌ವ್ಯಾಗನ್ ವಿರುದ್ಧ ಕಿಡಿ ಕಾರಿರುವ ರಾಷ್ಟ್ರೀಯ ಹಸಿರು ಮಂಡಳಿ ದಂಡದ ಮೊತ್ತವನ್ನು 500 ಕೋಟಿ ರೂಪಾಯಿಗೆ ಏರಿಸಿದೆ. ಈ ಮೂಲಕ ನಿಯಮ ಪಾಲನೆ ಹಾಗೂ ವಂಚನೆ ಪ್ರಕರಣಕ್ಕೆ ತಕ್ಕ ಶಾಸ್ತಿ ಮಾಡಿದೆ.