ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

By Web DeskFirst Published Mar 7, 2019, 2:55 PM IST
Highlights

ನಡು ರಸ್ತೆಯಲ್ಲಿ ಬೈಕ್ ಸವಾರರನ್ನ ನಿಲ್ಲಿಸಿದ ಪೊಲೀಸರು ಮಹಿಳೆಯ ಹೆಲ್ಮೆಟ್ ತೆಗೆದು ಪುಡಿ ಪುಡಿ ಮಾಡಿದ್ದಾರೆ. ಬಳಿಕ ಸರ್ಪ್ರೈಸ್ ನೀಡಿದ್ದಾರೆ.  ಪೊಲೀಸರು ಈ ರೀತಿ ಮಾಡಿದ್ದೇಕೆ? ಇಲ್ಲಿದೆ ವಿವರ.

ನವದೆಹಲಿ(ಮಾ.07): ವಿಶ್ವದಲ್ಲಿ ಭಾರತ ಗರಿಷ್ಠ ದ್ವಿಚಕ್ರ ವಾಹನ ಮಾರುಕಟ್ಟೆ ಹೊಂದಿದೆ. ಅತೀ ಹೆಚ್ಚು ದ್ವಿಚಕ್ರವಾಹನಗಳು ಪ್ರತಿ ದಿನ ಓಡಾಡುತ್ತಿದೆ. ಆದರೆ ರಸ್ತೆ ಸುರಕ್ಷತೆ ಪಾಲಿಸುವಲ್ಲಿ ಮಾತ್ರ ತುಂಬಾ ಹಿಂದಿದೆ. ಅದರಲ್ಲೂ ಹೆಲ್ಮೆಟ್ ಕಡ್ಡಾಯವಾಗಿದ್ದರೂ ಇನ್ನೂ ಕೂಡ ಹಲವು ಬೈಕ್ ಸವಾರರು ಗಂಭೀರವಾಗಿ ತೆಗೆದುಕೊಂಡಿಲ್ಲ. 

ಇದನ್ನೂ ಓದಿ: ಹಿರೋ Xtreme 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ!

ಪೊಲೀಸರು ಇದ್ದಾರೆ, ದಂಡ ಪಾವತಿಸಬೇಕು ಅನ್ನೋ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಹೆಲ್ಮೆಟ್ ಧರಿಸುವವರ ಸಂಖ್ಯೆ ಕೂಡ ಹೆಚ್ಚೇ ಇದೆ. ಇದು ಕೂಡ ಅಪಾಯಕ್ಕೆ ಕಾರಣವಾಗಲಿದೆ. ಇದೀಗ ದೆಹಲಿಯಲ್ಲಿ ಸುರಕ್ಷತಾ ಅಭಿಯಾನ ಕೈಗೊಂಡಿರುವ ಪೊಲೀಸರು ಮಹಿಳೆಯ ಹೆಲ್ಮೆಟ್ ತೆಗೆದು ನಡು ರಸ್ತೆಯಲ್ಲಿ ಪುಡಿ ಮಾಡಿದ್ದಾರೆ.

ಇದನ್ನೂ ಓದಿ: ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!

ಕಳಪೆ ಗುಣಮಟ್ಟದ ಹೆಲ್ಮೆಟ್ ಅಥವಾ ಹೆಲ್ಮೆಟ್ ಇಲ್ಲದೇ ವಾಹನ ಸವಾರಿ ಮಾಡುತ್ತಿರುವ ಸವಾರರನ್ನ ನಿಲ್ಲಿಸಿ ಸುರಕ್ಷತೆಯ ಪಾಠ ಹೇಳುತ್ತಿದ್ದಾರೆ.  ಈ ವೇಳೆ ಮಹಿಳೆಯ ಕಳಪೆ ಗುಣಮಟ್ಟದ ಹೆಲ್ಮೆಟನ್ನು ತೆಗೆದು ನಡು ರಸ್ತೆಯಲ್ಲಿ ನೆಲಕ್ಕೆ ಹಾಕಿ ಪುಡಿ ಮಾಡಿದ್ದಾರೆ. ಬಳಿಕ ಹೊಸ ISI ಸುರಕ್ಷತೆಯ ಹೆಲ್ಮೆಟನ್ನು ಉಚಿತವಾಗಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಕಳಪೆ ಗುಣಮಟ್ಟದ ಹೆಲ್ಮೆಟ್‌ನಿಂದ ಅಪಾಯ ಹೆಚ್ಚು. ಅಘಾತವಾದ ಸಂದರ್ಭದಲ್ಲಿ ಈ ಹೆಲ್ಮೆಟ್‌ ರಕ್ಷಣೆ ನೀಡುವುದಿಲ್ಲ. ಇದನ್ನ ತೋರಿಸಲು ಪೊಲೀಸರು ಹೆಲ್ಮೆಟ್ ಪುಡಿ ಮಾಡಿದ್ದಾರೆ. ದೆಹಲಿ ಪೊಲೀಸರ ಸುರಕ್ಷತೆ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

click me!