7 ವರ್ಷಗಳ ಬಳಿಕ ಹೊಂಡಾ ಸಿವಿಕ್ ಕಾರು ಬಿಡುಗಡೆ!

Published : Mar 07, 2019, 04:08 PM IST
7 ವರ್ಷಗಳ ಬಳಿಕ ಹೊಂಡಾ ಸಿವಿಕ್ ಕಾರು ಬಿಡುಗಡೆ!

ಸಾರಾಂಶ

7 ವರ್ಷಗಳ ಬಳಿಕ ಹೊಂಡಾ ಸಿವಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಸಾಮರ್ಥ್ಯದೊಂದಿಗೆ ಸಿವಿಕ್ ಕಾರು ರಸ್ತೆಗಿಳಿಯುತ್ತಿದೆ. ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಈ ಕಾರು ಬಿಡುಗಡೆ ಹಾಗೂ ಇತರ ಮಾಹಿತಿ ಇಲ್ಲಿದೆ.  

ನವದೆಹಲಿ(ಮಾ.07): ಹೊಂಡಾ ಸಂಸ್ಥೆ ನೂತನ ಸಿವಿಕ್ ಕಾರು ಬಿಡುಗಡೆ ಮಾಡಿದೆ. 2019ರ ನೂತನ ಸಿವಿಕ್ ಕಾರು 10 ಜನರೇಶನ್ ಕಾರು ಎಂದು ಗುರುತಿಸಿಕೊಂಡಿರುವ ಸಿವಿಕ್ ಕಾರು ಹಲವು ವಿಶೇಷತೆ ಹಾಗೂ ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಭಾರತದಲ್ಲಿ ಹೊಂಡಾ ಸಿವಿಕ್ ಕಾರು ಬಿಡುಗಡೆಗೊಳ್ಳುತ್ತಿದೆ. 

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ಸ್ಕೋಡಾ ಒಕ್ಟಿವಾ, ಟೊಯೊಟಾ ಕೊರೊಲಾ ಹಾಗೂ ಹ್ಯುಂಡೈ ಎಲಾಂಟ್ರ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಸಿವಿಕ್ ರಸ್ತೆಗಿಳಿಯುತ್ತಿದೆ.   ನೂತನ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಈ ಹಿಂದೆ ಕೇವಲ ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿತ್ತು.

ಇದನ್ನೂ ಓದಿ: ಸಾವಿರಾರು ವಾಹನಗಳು ಗುಜರಿಗೆ!: ಯಾಕೆ? ಯಾವ ವಾಹನಗಳು ಇಲ್ಲಿದೆ ಮಾಹಿತಿ!

ABS, EBD ಸೇರಿದಂತೆ ಗರಿಷ್ಠ ಸುರಕ್ಷತೆಯ ಬ್ರೇಕ್, ಕ್ರಾಶ್ ಟೆಸ್ಟ್ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ.  1.8 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್  139 bhp ಪವರ್ ಹಾಗೂ  174 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  1.6 ಲೀಟರ್  i-DTEC ಡೀಸೆಲ್ ಎಂಜಿನ್ 118 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
 

PREV
click me!

Recommended Stories

ಮೊದಲ ಕಾರಿನ ಮೇಲೆ ವಿಶೇಷ ಮೋಹ, ರೋಲ್ಸ್ ರಾಯ್ಸ್ ಕಾರಿದ್ರೂ ಹಳೆ ಮಾರುತಿ 800 ಮರುಖರೀದಿಸಿದ ಉದ್ಯಮಿ
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ