ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಭಾರತದ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಭಾರತದಲ್ಲಿ ತಮ್ಮ ಐಷಾರಾಮಿ ಕಾರು ಬಿಟ್ಟು ಹೋಗಿದ್ದಾರೆ. ಹೀಗೆ ವಿದೇಶಕ್ಕೆ ಪರಾರಿಯಾದ ಶ್ರೀಮಂತ ಉದ್ಯಮಿಗಳು ಬಳಸುತ್ತಿದ್ದ ಕಾರುಗಳ ವಿವರ ಇಲ್ಲಿದೆ.
ಬೆಂಗಳೂರು(ಫೆ.14): ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಸದ್ಯ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ ಸದ್ಯ ವಿದೇಶದಲ್ಲಿ ಕಾನೂನು ಪ್ರಕ್ರಿಯೆ ಎದುರಿಸುತ್ತಿದ್ದಾರೆ. ಆದರೆ ರಾತ್ರೋ ರಾತ್ರೋ ಪರಾರಿಯಾದಾಗ ಶ್ರೀಮಂತ ಉದ್ಯಮಿಗಳು ಬಳಸುತ್ತಿದ್ದ ಐಷಾರಾಮಿ ಕಾರುಗಳು ಅನಾಥವಾಗಿಬಿಡ್ತು.
undefined
ಇದನ್ನೂ ಓದಿ: ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!
ವಿಜಯ್ ಮಲ್ಯ ಕಾರುಗಳನ್ನ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ. ಆದರೆ ಈ ಉದ್ಯಮಿಗಳ ಬಳಿ ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ದಿಕ್ಕು ತೋಚದೆ ಭಾರತದಲ್ಲೇ ಇವೆ. ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಭಾರತದಲ್ಲಿ ಬಿಟ್ಟು ಹೋದ ಐಷಾರಾಮಿ ಕಾರುಗಳ ವಿವರ ಇಲ್ಲಿದೆ.
ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!
ವಿಜಯ್ ಮಲ್ಯ ಭಾರತದಲ್ಲಿ ಬಿಟ್ಟುಹೋದ ಕಾರು:
ರೋಲ್ಸ್ ರಾಯ್ಸ್ ಫಾಂಟಮ್ - 8.9 ಕೋಟಿ ರೂಪಾಯಿ
ರೋಲ್ಸ್ ರಾಯ್ಸ್ ಘೋಸ್ಟ್ - 5.25 ಕೋಟಿ ರೂಪಾಯಿ
ಮೆಸರಾತಿ ಕ್ವಾರ್ಟರೆಪೋರ್ಟೆ - 1.67 ಕೋಟಿ ರೂಪಾಯಿ
ಮರ್ಸಡೀಸ್ ಬೆಂಝ್ S ಕ್ಲಾಸ್- 7.8 ಲಕ್ಷ ರೂಪಾಯಿ
ಇದನ್ನೂ ಓದಿ: ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?
ನೀರವ್ ಮೋದಿ ಭಾರತದಲ್ಲಿ ಬಿಟ್ಟುಹೋದ ಕಾರು:
ರೋಲ್ಸ್ ರಾಯ್ಸ್ ಘೋಸ್ಟ್ - 5.25 ಕೋಟಿ ರೂಪಾಯಿ
ಪೋರ್ಶೆ ಪನಾಮೆರ - 2.09 ಕೋಟಿ ರೂಪಾಯಿ
ಮರ್ಸಡೀಸ್ ಬೆಂಝ್ GLS 350 CDI - 1 ಕೋಟಿ ರೂಪಾಯಿ
ಮರ್ಸಡೀಸ್ ಬೆಂಝ್ CLS-Class - 84.7 ಲಕ್ಷ ರೂಪಾಯಿ