ಭಾರತದ ವಾಹನ ಮಾರಾಟ ಪಾತಾಳಕ್ಕೆ ಇಳಿದಿದೆ. ಹೊಸ ವಾಹನ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಡೀಲರ್‌ಗಳು, ಶೋ ರೂಂಗಳು ಬಾಗಿಲು ಹಾಕುತ್ತಿವೆ. ಉದ್ಯೋಗ ಕಡಿತಗೊಳ್ಳುತ್ತಿದೆ.
ದೆಹಲಿ(ಜು.31): ಕಳೆದ 8 ವರ್ಷಗಳಲ್ಲಿ ಭಾರತದ ವಾಹನ ಮಾರುಕಟ್ಟೆ ಮತ್ತೆ ಪಾತಾಳಕ್ಕಿಳಿದಿದೆ. ಕಾರು, ಬೈಕ್ ಸೇರಿದಂತೆ ವಾಹನಗಳು ಮಾರಾಟವಾಗದೇ ಉಳಿಯುತ್ತಿದೆ. ವಾಹನ ಬೆಲೆ ಏರಿಕೆ, ವಾಹನ ಬಿಡಿಭಾಗಗಳ ಬೆಲೆ ಏರಿಕೆ, ಗರಿಷ್ಠ GST, ಇಂಧನ ಮಾರುಕಟ್ಟೆಯಲ್ಲಿನ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಭಾರತೀಯ ವಾಹನ ಮಾರುಕಟ್ಟೆ ಸಂಕಷ್ಟ ಎದುರಿಸುತ್ತಿದೆ. ಇದರ ಪರಿಣಾಮವಾಗಿ ಡೀಲರ್‌ಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ರಸ್ತೆ ನಿಯಮ ಪಾಲಿಸಿದರೆ ಪೊಲೀಸರಿಂದ ಭರ್ಜರಿ ಗಿಫ್ಟ್!
undefined
ವಾಹನ ಮಾರಾಟ ಕುಸಿತದಿಂದ ದೆಹಲಿ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಸೇರಿದಂತೆ ದೇಶದಲ್ಲಿ ಬರೋಬ್ಬರಿ 286 ಡೀಲರ್‌ಗಳು ಬಾಗಿಲು ಮುಚ್ಚಿದ್ದಾರೆ. ಇದರಿಂದ 32,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಕೇವಲ ಕಳೆದ 18 ತಿಂಗಳ ಅಂಕಿ ಅಂಶ. ಮಹಾರಾಷ್ಟ್ರದಲ್ಲಿ 84 ಡೀಲರ್ಸ್, ತಮಿಳುನಾಡು 35, ದೆಹಲಿಯಲ್ಲಿ 27, ಬಿಹಾರದಲ್ಲಿ 26, ರಾಜಸ್ಥಾನದಲ್ಲಿ 21 ಡೀಲರ್ಸ್ ವ್ಯವಹಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: 3 ಗಂಟೆಯಲ್ಲಿ 1,169 ಡ್ರಿಂಕ್ & ಡ್ರೈವ್ ಪ್ರಕರಣ; ಬೆಂಗಳೂರು ಪೊಲೀಸರ ದಾಖಲೆ!
ಕಳೆದ 5 ವರ್ಷದಲ್ಲಿ ಕಾರು ಉತ್ಪಾದನಾ ವೆಚ್ಚ ದ್ವಿಗುಣವಾಗಿದೆ. ಆದರೆ ಮಾರಾಟ ಮಾತ್ರ ಇಳಿಕೆಯಾಗಿದೆ. 2019ರ ಜೂನ್ ತಿಂಗಳಲ್ಲಿ ನೂತನ ವಾಹನ ರಿಜಿಸ್ಟ್ರೇಶನ್‌ನಲ್ಲಿ 5.4% ಇಳಿಕೆಯಾಗಿದೆ. ಜೂನ್ ತಿಂಗಳಲ್ಲಿ 16,46,776 ನೂತನ ವಾಹನ ರಿಜಿಸ್ಟ್ರೇಶನ್ ಪೂರ್ಣಗೊಂಡಿದೆ. ಆದರೆ 2018ರ ಜೂನ್ ತಿಂಗಳಲ್ಲಿ 17,81,431 ನೂತನ ವಾಹನಗಳು ರಿಜಿಸ್ಟ್ರೇಶನ್ ಪೂರ್ಣಗೊಳಿಸಿತ್ತು. ಕರ್ಮಿಶಿಯಲ್ ವಾಹನ ಮಾರಾಟ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇಕಡಾ 19.3 ರಷ್ಟು ಇಳಿಕೆಯಾಗಿದೆ.