ಮಸೂದೆ ಪಾಸ್, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ!: ಯಾವುದಕ್ಕೆ ಎಷ್ಟು ದಂಡ?

By Web Desk  |  First Published Aug 1, 2019, 10:25 AM IST

ನೂತನ ಮೋಟಾರ್‌ ವಾಹನ ಮಸೂದೆಗೆ ಸಂಸತ್‌ ಒಪ್ಪಿಗೆ| ನಿಯಮ ಉಲ್ಲಂಘಿಸಿದರೆ ಕಾದಿದೆ ಭಾರೀ ದಂಡ


ನವದೆಹಲಿ[ಆ.01]: ರಸ್ತೆ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ವಿಧಿಸಲು ಅವಕಾಶ ಇರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಮಂಗಳವಾರ ಅನುಮೋದನೆ ನೀಡಿದೆ. ಈಗಾಗಲೇ ಈ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಹೀಗಾಗಿ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಲು ರಾಷ್ಟ್ರಪತಿಗಳ ಸಹಿಯೊಂದೇ ಬಾಕಿ ಉಳಿದಿದೆ.

ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಗಿದ್ದು, ಮಸೂದೆಯ ಪರವಾಗಿ 108 ಹಾಗೂ ವಿರೋಧವಾಗಿ 13 ಮತಗಳು ಚಾಲಾವಣೆ ಆಗಿವೆ.

Latest Videos

undefined

ಪರಿಷ್ಕೃತ ಮಸೂದೆ ಅನ್ವಯ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 5 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರು. ಪರಿಹಾರ ನೀಡಲಾಗುವುದು. ರಸ್ತೆ ಅಪಘಾತದಲ್ಲಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರನ್ನು ಆಸ್ಪತ್ರೆಗೆ ಸೇರಿಸುವವರ ರಕ್ಷಣೆ ಸೇರಿದಂತೆ ಇನ್ನಿತರ ಮಹತ್ವದ ಅಂಶಗಳನ್ನು ಮಸೂದೆ ಒಳಗೊಂಡಿದೆ.

ಯಾವುದಕ್ಕೆ ಎಷ್ಟು ದಂಡ?

- ಮದ್ಯಪಾನ ಮಾಡಿ ವಾಹನ ಚಾಲನೆ: 2000 ರು.ನಿಂದ 10000 ರು.

- ರ‍್ಯಾಷ್‌ ಡ್ರೈವಿಂಗ್‌: 1000 ರು.ನಿಂದ 5000 ರು.

- ಡಿಎಲ್‌ ಇಲ್ಲದೇ ಚಾಲನೆ: 500 ರು.ನಿಂದ 5000 ರು.

- ಮಿತಿಮೀರಿದ ವೇಗ: 1000 ರು.ನಿಂದ 2000 ರು.

-ಸೀಟ್‌ ಬೆಲ್ಟ್‌ ಇಲ್ಲದೆ ಚಾಲನೆ: 100 ರು.ನಿಂದ 1000 ರು.

- ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ: 1000 ರು.ನಿಂದ 5000 ರು.

- ವಾಹನಗಳ ಇಂಜಿನ್‌ ಅಗತ್ಯ ಸ್ಟಾಂಡರ್ಡ್‌ ಇಲ್ಲದಿದ್ದರೆ, ಉತ್ಪಾದಕರಿಗೆ 500 ಕೋಟಿ ರು.ವರೆಗೂ ದಂಡ

click me!